ADVERTISEMENT

ಚಿನ್ನ ಕಳ್ಳ ಸಾಗಣೆ: ಏರ್‌ ಇಂಡಿಯಾ ಸಿಬ್ಬಂದಿ ಬಂಧನ

ಪಿಟಿಐ
Published 7 ಡಿಸೆಂಬರ್ 2020, 12:28 IST
Last Updated 7 ಡಿಸೆಂಬರ್ 2020, 12:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸುಮಾರು ₹72.46 ಲಕ್ಷ ಮೌಲ್ಯದ ಚಿನ್ನ ಕಳ್ಳ ಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಏರ್‌ ಇಂಡಿಯಾದ ನೌಕರ ಮತ್ತು ಕೇಟರಿಂಗ ವಿಭಾಗದ ಸಿಬ್ಬಂದಿಯನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಸೋಮವಾರ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಲಂಡನ್‌ನಿಂದ ಬಂದ ವಿಮಾನದಲ್ಲಿದ್ದ ಏರ್‌ ಇಂಡಿಯಾದ ನೌಕರ ಕಸ್ಟಮ್ಸ್‌ ಅಧಿಕಾರಿಗಳನ್ನು ಕಂಡು, ಚಿನ್ನವನ್ನು ವಿಮಾನದ ಲಗೇಜ್‌ ಇಡುವ ಸ್ಥಳದಲ್ಲಿ ಬಚ್ಚಿಡಲು ಪ್ರಯತ್ನಿಸಿದರು. 1.6 ಕೆ.ಜಿಯ ಬೆಳ್ಳಿಯ ಬಣ್ಣದಿಂದ ಲೇಪಿತವಾದ ನಾಲ್ಕು ಖಡ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘2020ರ ಡಿಸೆಂಬರ್ 3ರಂದು ಲಂಡನ್‌ನಿಂದ ಭಾರತಕ್ಕೆ 1.5 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.