ADVERTISEMENT

ವಿಮಾನ ಪತನ: ಗಾಯಾಳುಗಳ ಚಿಕಿತ್ಸೆಗೆ ಸಜ್ಜಾದ ಎನ್‌ಬಿಸಿ

ಪಿಟಿಐ
Published 12 ಜೂನ್ 2025, 14:38 IST
Last Updated 12 ಜೂನ್ 2025, 14:38 IST
   

ಮುಂಬೈ: ವಿಮಾನ ಪತನಗೊಂಡ ಬೆನ್ನಲ್ಲೇ, ಸುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದರಲ್ಲಿ ವಿಶೇಷ ಪರಿಣತಿ ಹೊಂದಿದ ನವಿ ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ (ಎನ್‌ಬಿಸಿ)ವು 20 ಹಾಸಿಗೆಗಳನ್ನು ಸಿದ್ಧಪಡಿಸಿಕೊಂಡಿತು.

‘ದುರಂತದ ಗಂಭೀರತೆ ಆಧರಿಸಿ, 20 ಹಾಸಿಗೆಗಳನ್ನು ಸ್ವಯಂಪ್ರೇರಿತವಾಗಿ ಸಿದ್ಧಪಡಿಸಿಕೊಂಡಿದ್ದೇವೆ’ ಎಂದು ಭಾರತೀಯ ಸುಟ್ಟಗಾಯಗಳ ಸಂಶೋಧನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಹಾಗೂ ಕಾರ್ಯದರ್ಶಿ ಡಾ. ಸುನೀಲ್‌ ಕೇಶ್ವಾನಿ ತಿಳಿಸಿದ್ದಾರೆ.

‘ಅಗತ್ಯ ಬಿದ್ದರೆ, ಮತ್ತೆ 20 ಹಾಸಿಗೆಗಳನ್ನು ಸಿದ್ಧಪಡಿಸಲು ತಯಾರಿದ್ದೇವೆ. ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಯು ಸುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ 50 ಹಾಸಿಗೆಗಳ ವ್ಯವಸ್ಥೆ ಹೊಂದಿದೆ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.