
ಸಾಂದರ್ಭಿಕ ಚಿತ್ರ
ನವದೆಹಲಿ: ಮಂಗೋಲಿಯಾ ರಾಜಧಾನಿ ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿದ್ದ 228 ಪ್ರಯಾಣಿಕರನ್ನು ಏರ್ ಇಂಡಿಯಾ ಬುಧವಾರ ಬೆಳಿಗ್ಗೆ ದೆಹಲಿಗೆ ಕರೆತಂದಿದೆ.
ಸೋಮವಾರ ಸ್ಯಾನ್ ಫ್ರಾನ್ಸಿಸ್ಕೊದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ತಾಂತ್ರಿಕ ದೋಷದಿಂದ ಮಂಗೋಲಿಯಾ ರಾಜಧಾನಿಯತ್ತ ತಿರುಗಿಸಲಾಗಿತ್ತು. ಎರಡು ದಿನಳಿಂದ ಪ್ರಯಾಣಿಕರು ಉಲಾನ್‌ಬಾತರ್‌ನಲ್ಲಿದ್ದರು.
ಉಲಾನ್‌ಬಾತರ್‌ನಿಂದ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾದ ಪರಿಹಾರ ವಿಮಾನ ಬೋಯಿಂಗ್ 787 ಡ್ರೀಮ್‌ಲೈನರ್ ಬುಧವಾರ ಬೆಳಿಗ್ಗೆ 8:24ರ ಸುಮಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಗಬದಲಿಸಲಾಗಿದ್ದ ಬೋಯಿಂಗ್ 777 ವಿಮಾನದಲ್ಲಿ 228 ಮಂದಿ ಪ್ರಯಾಣಿಕರು, 17 ಸಿಬ್ಬಂದಿ ಸೇರಿ 245 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.
ಸ್ಯಾನ್ ಫ್ರಾನ್ಸಿಸ್ಕೊದಿಂದ ಕೋಲ್ಕತ್ತ ಮೂಲಕ ದೆಹಲಿಗೆ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾದ ಎಐ174, ವಿಮಾನದ ಸಿಬ್ಬಂದಿಗೆ ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಇದೆ ಎಂದು ಅನುಮಾನ ಬಂದಿದೆ.
ನಂತರ, ಅವರು ಉಲಾನ್‌ಬತಾರ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.