ADVERTISEMENT

ಭಾರತ–ಯುಎಇ ನಡುವಣ ವಿಮಾನಯಾನ ಇಂದಿನಿಂದ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:04 IST
Last Updated 24 ಜೂನ್ 2021, 3:04 IST
ಏರ್ ಇಂಡಿಯಾ ವಿಮಾನ -ಎಎಫ್‌ಪಿ ಚಿತ್ರ
ಏರ್ ಇಂಡಿಯಾ ವಿಮಾನ -ಎಎಫ್‌ಪಿ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ ಪ್ರಕರಣಗಳ ಉಲ್ಬಣದಿಂದಾಗಿ ಭಾರತ–ಯುಎಇ ವಿಮಾನಯಾನದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಿದ್ದು, ಇಂದಿನಿಂದ (ಗುರುವಾರ) ಕಾರ್ಯಾಚರಣೆ ಪುನಾರಂಭಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ.

‘ಜೂನ್ 24ರಿಂದ ಎಲ್ಲಾ ಏರ್ ಇಂಡಿಯಾ ವಿಮಾನಗಳು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಡಿಎಕ್ಸ್‌ಬಿ) ಟರ್ಮಿನಲ್ -1ರಿಂದ ಕಾರ್ಯನಿರ್ವಹಿಸಲಿವೆ’ ಎಂದು ಏರ್ ಇಂಡಿಯಾ ತಿಳಿಸಿದೆ.

ಏತನ್ಮಧ್ಯೆ, ದುಬೈನಿಂದ ನಿರ್ಗಮಿಸಲಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ದುಬೈ ಟರ್ಮಿನಲ್ -2ರಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.

ADVERTISEMENT

ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾದ ಕಾರಣಕ್ಕೆ ಏ.24ರಿಂದ ವಿಮಾನ ಸಂಚಾರ ನಿಷೇಧಿಸಿ ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.