ADVERTISEMENT

ಐಎಎಫ್‌ ಉಪ ಮುಖ್ಯಸ್ಥರಾಗಿ ಎ.ಪಿ. ಸಿಂಗ್‌ ಅಧಿಕಾರ ಸ್ವೀಕಾರ

ಪಿಟಿಐ
Published 1 ಫೆಬ್ರುವರಿ 2023, 14:28 IST
Last Updated 1 ಫೆಬ್ರುವರಿ 2023, 14:28 IST
ಏರ್‌ ಮಾರ್ಷಲ್‌ ಎ.ಪಿ. ಸಿಂಗ್‌ –ಪಿಟಿಐ ಚಿತ್ರ
ಏರ್‌ ಮಾರ್ಷಲ್‌ ಎ.ಪಿ. ಸಿಂಗ್‌ –ಪಿಟಿಐ ಚಿತ್ರ   

ನವದೆಹಲಿ: ಏರ್‌ ಮಾರ್ಷಲ್‌ ಎ.ಪಿ. ಸಿಂಗ್‌ ಅವರು ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.

ಎ.ಪಿ. ಸಿಂಗ್‌ ಅವರು 5 ಸಾವಿರ ಗಂಟೆಗಳ ವಿಮಾನ ಚಾಲನಾ ಅನುಭವ ಹೊಂದಿದ್ದಾರೆ. ಈ ಮುನ್ನ ಏರ್‌ ಮಾರ್ಷಲ್‌ ಸಂದೀ‍ಪ್‌ ಸಿಂಗ್‌ ಅವರು ಉಪ ಮುಖ್ಯಸ್ಥರಾಗಿದ್ದರು. ಅವರು ಮಂಗಳವಾರ ನಿವೃತ್ತಿ ಹೊಂದಿದ್ದರು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಎ.ಪಿ. ಸಿಂಗ್‌ ಅವರು, ಭಾರತೀಯ ವಾಯುಪಡೆಗೆ 1984ರ ಡಿಸೆಂಬರ್‌ 21ರಂದು ನೇಮಕವಾಗಿದ್ದರು.

ADVERTISEMENT

ಸಿಂಗ್‌ ಅವರು ವಾಯುಪಡೆ ವಿಮಾನ ಬೋಧಕ ಮತ್ತು ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿದ್ದು, ವಿವಿಧ ಸ್ಥಿರ ಮತ್ತು ರೋಟರಿ ವಿಂಗ್ ವಿಮಾನಗಳಲ್ಲಿ 5,000 ಗಂಟೆಗಳ ಚಾಲನಾ ಅನುಭವವನ್ನು ಹೊಂದಿದ್ದಾರೆ.

ಸಿಂಗ್‌ ಅವರು ಸ್ಕ್ವಾಡ್ರನ್‌ನಲ್ಲಿ (ಮಿಲಿಟರಿ ವಿಮಾನಗಳನ್ನು ಒಳಗೊಂಡಿರುವ ಘಟಕ) ಹಾಗೂ ಸಂಘರ್ಷ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಪರೀಕ್ಷಾ ಪೈಲಟ್‌ ಆಗಿಯೂ ಕಾರ್ಯ ನಿರ್ವಹಿಸಿದ್ದ ಅವರು, ಮಾಸ್ಕೊದಲ್ಲಿ ನಡೆದ ಮಿಗ್‌–29 ಉನ್ನತೀಕರಣ ಯೋಜನೆಯ ತಂಡದ ನಿರ್ವಹಣೆಗಾರರಾಗಿಯೂ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.