ADVERTISEMENT

ಹೈದರಾಬಾದ್–ದೆಹಲಿ ಏರ್‌ಏಷ್ಯಾ ವಿಮಾನ ತುರ್ತುಭೂಸ್ಪರ್ಶ

ಏಜೆನ್ಸೀಸ್
Published 13 ಮೇ 2019, 13:29 IST
Last Updated 13 ಮೇ 2019, 13:29 IST
   

ನವದೆಹಲಿ: ಏರ್‌ಏಷ್ಯಾದ ಹೈದರಾಬಾದ್‌– ದೆಹಲಿ ವಿಮಾನವನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ದೆಹಲಿ ವಿಮಾನ ನಿಲ್ದಾಣದ ವಿಮಾನ ಸಂಚಾರ ನಿಯಂತ್ರಣ ಕೇಂದ್ರದ (ಎಟಿಸಿ) ಅಧಿಕಾರಿಗಳು, ‘ಪೈಲಟ್‌ ತುರ್ತು ಭೂಸ್ಪರ್ಶಕ್ಕಾಗಿ ಮನವಿ ಮಾಡಿದ್ದರು’ ಎಂದರು.ಹೈಡ್ರಾಲಿಕ್‌ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆ 11 ಗಂಟೆಗೆ ಏರ್‌ಏಷ್ಯಾ I5–719 (ಹೈದರಾಬಾದ್‌–ದೆಹಲಿ)ವಿಮಾನದ ಪೈಲಟ್‌ ಹೈಡ್ರಾಲಿಕ್‌ ವೈಫಲ್ಯ ಉಂಟಾಗಿರುವ ಬಗ್ಗೆ ಎಟಿಸಿಗೆ ಮಾಹಿತಿ ನೀಡಿದ ನಂತರ ತುರ್ತುಭೂಸ್ಪರ್ಶಕ್ಕೆ ಅವಕಾಶ ಮಾಡಿಕೊಡಲಾಯಿತು. ಅಗ್ನಿಶಾಮಕ ವಾಹನಗಳು ಸಿದ್ಧವಾಗಿಸಿಕೊಂಡೇ 11.15ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು’ ಎಂದು ಎಟಿಸಿ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.