ADVERTISEMENT

ಅಖಿಲೇಶ್‌ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಎಸ್‌ಪಿಗೆ ಸೋಲು: ಶಿವಪಾಲ್‌ ಕಿಡಿ

ಪಿಟಿಐ
Published 26 ಜುಲೈ 2022, 12:13 IST
Last Updated 26 ಜುಲೈ 2022, 12:13 IST
ಲಖನೌದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಪಾಲ್‌ ಯಾದವ್‌ ಮಾತನಾಡಿದರು–ಪಿಟಿಐ ಚಿತ್ರ 
ಲಖನೌದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಪಾಲ್‌ ಯಾದವ್‌ ಮಾತನಾಡಿದರು–ಪಿಟಿಐ ಚಿತ್ರ    

ಲಖನೌ: ‘ಅಖಿಲೇಶ್‌ ಯಾದವ್‌ ಅವರ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೋಲು ಎದುರಾಯಿತು’ ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಮುಖ್ಯಸ್ಥ ಶಿವಪಾಲ್‌ ಸಿಂಗ್‌ ಯಾದವ್‌ ಮಂಗಳವಾರ ಟೀಕಿಸಿದ್ದಾರೆ.

‘ಶಿವಪಾಲ್‌ ಅವರೇ ಎಸ್‌ಪಿ ಬಿಟ್ಟು ಬೇರೆಲ್ಲಾದರೂ ನಿಮಗೆ ಹೆಚ್ಚು ಗೌರವ ಸಿಗುತ್ತದೆ ಎಂದು ಅನಿಸಿದ್ದರೆ, ಅಲ್ಲಿಗೆ ಹೋಗಲು ಹಾಗೂ ಮೈತ್ರಿಕೂಟ ತೊರೆಯಲು ನೀವು ಸ್ವತಂತ್ರರಿದ್ದೀರಿ’ ಎಂದು ಸಮಾಜವಾದಿ ಪಕ್ಷವು ಶನಿವಾರ ಟ್ವೀಟ್‌ ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಪಾಲ್‌, ‘ಇದು ಅಖಿಲೇಶ್‌ ಅವರ ರಾಜಕೀಯ ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿ. ಹೀಗೆಲ್ಲಾ ಅವಮಾನಿಸುವ ಬದಲು ನನ್ನನ್ನು ಮೈತ್ರಿಕೂಟದಿಂದ ಉಚ್ಚಾಟಿಸಿದ್ದರೆ ಚೆನ್ನಾಗಿತ್ತು’ ಎಂದಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಯಶವಂತ ಸಿನ್ಹಾ ಅವರನ್ನು ಬೆಂಬಲಿಸಿತ್ತು. ಆದರೆ ಶಿವಪಾಲ್‌ ಅವರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದ್ದರು. ಇದು ಎಸ್‌ಪಿ ನಾಯಕರ ಕೋಪಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.