ADVERTISEMENT

ಎಡಿಆರ್‌–ದಕ್ಷ್‌ ಸಮೀಕ್ಷೆ: ಉದ್ಯೋಗವಕಾಶ ಸುಧಾರಿಸಬೇಕಿತ್ತು,ಆಗಿಲ್ಲ-ಮತದಾರರ ಮನದಾಳ

ಲೋಕಸಭೆ ಚುನಾವಣೆ 2019ರ ಆದ್ಯತೆಯ ವಿಷಯಗಳು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:38 IST
Last Updated 16 ಏಪ್ರಿಲ್ 2019, 20:38 IST
   

ಸರ್ಕಾರವು ಉದ್ಯೋಗವಕಾಶದ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದುದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಮತದಾರರ ಅಭಿಪ್ರಾಯ.

ಮತದಾನ ಮಾಡುವಾಗ ಉದ್ಯೋಗವಕಾಶವು ಎರಡೂ ಪ್ರದೇಶಗಳ ಜನರ ಆದ್ಯತೆಯಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಉದ್ಯೋಗವಕಾಶದ ವಿಚಾರದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಈ ವಿಚಾರದಲ್ಲಿ ಸರ್ಕಾರಗಳದ್ದು ಕಳಪೆ ಸಾಧನೆ ಎನ್ನುತ್ತಾರೆ ಮತದಾರರು. ಎಇಡಿಆರ್‌ ಮತ್ತು ದಕ್ಷ್‌ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಸಮೀಕ್ಷೆ ನಡೆಸಿದ ಅವಧಿ : ಅಕ್ಟೋಬರ್‌–ಡಿಸೆಂಬರ್ 2018

ADVERTISEMENT

64.88% ಪುರುಷರು

35.12% ಮಹಿಳೆಯರು

65.28% 18–40 ವರ್ಷದ ಮತದಾರರು

64.84% ಗ್ರಾಮೀಣ ಭಾಗದವರು

35.16% ನಗರ ಪ್ರದೇಶದವರು

ಸರ್ಕಾರದಿಂದ ಜನರು ಏನನ್ನು ಬಯಸಿದ್ದರು ಮತ್ತು ಆ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಯ ಮಟ್ಟ ಎಷ್ಟು ಎಂಬುದನ್ನು ವಿವರಿಸುವ ಗ್ರಾಫ್ ಇದು.ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ಮತದಾರರಿಗೂ 25 ವಿಷಯಗಳ ಆದ್ಯತೆಯ ಪಟ್ಟಿ ನೀಡಲಾಗಿತ್ತು. ಅವುಗಳಲ್ಲಿ ಹೆಚ್ಚು ಜನರು ಆಯ್ಕೆ ಮಾಡಿಕೊಂಡ ಮೊದಲ 10 ಆದ್ಯತೆಯ ವಿಷಯಗಳನ್ನು ಈ ಗ್ರಾಫ್‌ ಒಳಗೊಂಡಿದೆ.

ಸಮಗ್ರ ಭಾರತ

ಉದ್ಯೋಗವಕಾಶ ಸುಧಾರಣೆ 46.80% (2.15)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆ 34.60% (2.35)

ಕುಡಿಯುವ ನೀರು 30.50% (2.52)

ಉತ್ತಮ ರಸ್ತೆ 28.34% (2.41)

ಸಾರ್ವನಿಕ ಸಾರಿಗೆ ಸುಧಾರಣೆ 27.35% (2.58)

ಕೃಷಿಗೆ ನೀರಿನ ಲಭ್ಯತೆ 26.40% (2.16)

ಕೃಷಿ ಸಾಲದ ಲಭ್ಯತೆ 25.62% (2.15)

ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಲಭ್ಯತೆ 25.41% (2.23)

ಕೃಷಿ ಚಟುವಟಿಕೆಗಳಿಗೆ ಸಹಾಯಧನ 25.06% (2.06)

ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ 23.95% (2.26)

ಗ್ರಾಮೀಣ ಭಾರತ

ಉದ್ಯೋಗವಕಾಶ ಸುಧಾರಣೆ 44.21% (2.17)

ಕೃಷಿಗೆ ನೀರಿನ ಲಭ್ಯತೆ 40.62% (2.18)

ಕೃಷಿ ಸಾಲದ ಲಭ್ಯತೆ 39.42% (2.15)

ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಲಭ್ಯತೆ 39.09% (2.23)

ಕೃಷಿ ಚಟುವಟಿಕೆಗಳಿಗೆ ಸಹಾಯಧನ 38.56% (2.06)

ಕೃಷಿಗೆ ವಿದ್ಯುತ್ ಲಭ್ಯತೆ 36.62%(2.14)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆ 32.01% (2.35)

ಕುಡಿಯುವ ನೀರು 28.05% (2.52)

ಉತ್ತಮ ರಸ್ತೆ 24.46% (2.51)

ಸಾರ್ವನಿಕ ಸಾರಿಗೆ ಸುಧಾರಣೆ 24.46% (2.67)

ನಗರ ಭಾರತ

ವಿಷಯ; ಮತದಾರರ ಆದ್ಯತೆ; ಸಾಧನೆಯ ರ‍್ಯಾಂಕಿಂಗ್

ಉದ್ಯೋಗಾವಕಾಶ ಸುಧಾರಣೆ; 51.60% (2.10)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆಗಳು; 39.41% (2.34)

ಸಂಚಾರ ದಟ್ಟಣೆ; 37.17% (2.25)

ಕುಡಿಯುವ ನೀರು; 35.03% (2.40)

ಉತ್ತಮ ರಸ್ತೆ; 34.91% (2.23)

ನೀರು ಮತ್ತು ವಾಯು ಮಾಲಿನ್ಯ; 34.14% (2.25)

ಉತ್ತಮ ಸಾರಿಗೆ ಸೌಕರ್ಯ; 32.71% (2.41)

ಶಬ್ದಮಾಲಿನ್ಯ; 31.73% (2.25)

ಕಾನೂನು ಮತ್ತು ಸುವ್ಯವಸ್ಥೆ; 28.58% (2.57)

ಮನೆಬಳಕೆ ವಿದ್ಯುತ್ ಲಭ್ಯತೆ; 25.12% (2.58)

ಸರ್ವರಿಗೂ ಉದ್ಯೋಗದ್ದೇ ಚಿಂತೆ

ದೇಶದ ಎಲ್ಲಾ ಸಮುದಾಯದ ಮತ್ತು ಎಲ್ಲ ವರ್ಗದ ಜನರಿಗೂ ಮತದಾನದ ವೇಳೆ ಉದ್ಯೋಗವಕಾಶದ ಸ್ಥಿತಿಯೇ ಆದ್ಯತೆಯ ವಿಷಯ. ಈ ವಿಚಾರದಲ್ಲಿ ಸರ್ಕಶರಗಳ ಸಾಧನೆ ಕಳಪೆ ಎಂಬುದುಬಹುತೇಕ ಎಲ್ಲ ವರ್ಗ/ಸಮುದಾಯ/ವಯೋಮಾನದ ಮತದಾರರ ಅಭಿಪ್ರಾಯ

ಪರಿಶಿಷ್ಟ ಪಂಗಡ 48.07% (2.04)

ಪರಿಶಿಷ್ಟ ಜಾತಿ 48.46% (2)

ಇತರೆ ಹಿಂದುಳಿದ ವರ್ಗಗಳು 50.32% (2.14)

ಸಾಮಾನ್ಯ ವರ್ಗ 47.20% (2.11)

40 ವರ್ಷಕ್ಕಿಂತ ಹಿರಿಯರು 47.83% (2.13)

23–40 ವರ್ಷದವರು 47.49% (2.17)

23ಕ್ಕಿಂತ ಕಡಿಮೆ ವಯಸ್ಸಿನವರು 47.77% (2.11)

ಮೇಲ್ವರ್ಗ 48.49% (2.16)

ಮಧ್ಯಮ ವರ್ಗ 47.58% (2.14)

ಕೆಳವರ್ಗ 47.46% (2.15)

ಪುರುಷ 48.05% (2.14)

ಮಹಿಳೆ 46.61% (2.19)

ನಗರವಾಸಿಗಳು 51.60% (2.10)

ಗ್ರಾಮೀಣ ಜನರು 44.21% (2.17)

ಒಟ್ಟಾರೆ 46.80% (2.15)

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಎಷ್ಟು ಮಂದಿ ಈ ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸುತ್ತಾರೆ ಎಂಬುದನ್ನು ಈ ಲಂಬ ಗ್ರಾಫ್‌ನಲ್ಲಿ ಶೇಕಡಾವಾರು ಪ್ರಮಾಣದಲ್ಲಿ (%) ತೋರಿಸಲಾಗಿದೆ. ಗ್ರಾಮೀಣ ಭಾರತೀಯರ ಮತ್ತು ನಗರ ಭಾರತೀಯರ ಆದ್ಯತೆಗಳನ್ನು ಭಿನ್ನವಾಗಿವೆ. ಹೀಗಾಗಿ ಎರಡನ್ನೂ ಪ್ರತ್ಯೇಕವಾಗಿ ತೋರಿಸಲಾಗಿದೆ.

ಈ ಆದ್ಯತೆಗಳನ್ನು ಪೂರೈಸುವಲ್ಲಿ ಸರ್ಕಾರದ ಸಾಧನೆಯ ಮಟ್ಟವನ್ನು ಅಂಕೆಗಳಲ್ಲಿ ಗುರುತಿಸಲಾಗಿದೆ. 1 ಎಂಬುದು ಕಳಪೆ ಸಾಧನೆ, 5 ಎಂಬುದು ಅತ್ಯುತ್ತಮ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.