ADVERTISEMENT

ಹಿಂದಿ ದಿವಸ್: ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕು; ಅಮಿತ್ ಶಾ

ಪಿಟಿಐ
Published 14 ಸೆಪ್ಟೆಂಬರ್ 2021, 10:30 IST
Last Updated 14 ಸೆಪ್ಟೆಂಬರ್ 2021, 10:30 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಹಿಂದಿಯು ಭಾರತದ ಪ್ರಾದೇಶಿಕ ಭಾಷೆಗಳ ಸ್ನೇಹಿತನಾಗಿದೆ. ಎಲ್ಲ ಭಾಷೆಗಳನ್ನು ಉತ್ತೇಜಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದರು.

ಹಿಂದಿ ದಿವಸ್ ಅಂಗವಾಗಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿದರೂ ಕೂಡ ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಸಂವಹನ ನಡೆಸಬೇಕು. ಇಲ್ಲದಿದ್ದರೆ, ತಾಯಿ ಬೇರುಗಳಿಂದ ಮಕ್ಕಳು ದೂರವಾಗುತ್ತಾರೆ ಎಂದು ಹೇಳಿದರು.

'ಪ್ರಾದೇಶಿಕ ಭಾಷೆಗಳೊಂದಿಗೆ ಹಿಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಿಂದಿ ಎಲ್ಲಾ ಭಾರತೀಯ ಪ್ರಾದೇಶಿಕ ಭಾಷೆಗಳ 'ಸಖಿ' (ಸ್ನೇಹಿತ) ಆಗಿದೆ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳು ಹಿಂದಿ ಭಾಷೆಗೆ ಪೂರಕ ಮತ್ತು ಸಂಪೂರ್ಣಗೊಳಿಸುತ್ತವೆ. ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಶಾ ಹೇಳಿದರು.

ADVERTISEMENT

'2014 ರಿಂದ ಹೆಚ್ಚಿನ ಸಂಸದರು ಸಂಸತ್ತಿನಲ್ಲಿ ತಮ್ಮದೇ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಅದನ್ನು ಇಂಗ್ಲಿಷ್ ಮತ್ತು ಹಿಂದಿಗೆ ಮೌಖಿಕವಾಗಿ ಭಾಷಾಂತರಿಸಲಾಗುತ್ತಿದೆ. ಇದು ಜನರ ಪ್ರತಿನಿಧಿಗಳು ತಮ್ಮ ಪ್ರದೇಶದ ಸಮಸ್ಯೆಗಳನ್ನು ಉನ್ನತ ವೇದಿಕೆಯಲ್ಲಿ ಎತ್ತಿ ತೋರಿಸಲು ಸಹಾಯ ಮಾಡಿದೆ' ಎಂದು ಹೇಳಿದರು.

ಜನರು ಸರಕುಗಳನ್ನು ಉತ್ಪಾದಿಸುವುದರಲ್ಲಿ ಮಾತ್ರವಲ್ಲದೆ ಭಾಷೆಗಳಲ್ಲೂ ಕೂಡ 'ಆತ್ಮ ನಿರ್ಭರ್' ಆಗಿರಬೇಕು. ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ತನ್ನ ಆಲೋಚನೆಗಳನ್ನು ತಿಳಿಸಲು ಎಲ್ಲಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿಯಲ್ಲಿ ಮಾತ್ರ ಮಾತನಾಡುತ್ತಾರೆ' ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.