ADVERTISEMENT

ಅಜಂ ಖಾನ್‌ ಪುತ್ರನ ಶಾಸಕ ಸ್ಥಾನ ಅಸಿಂಧು

ನಾಮಪತ್ರದಲ್ಲಿ ಜನ್ಮ ದಿನಾಂಕದ ತಪ್ಪು ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ಮೊಹಮ್ಮದ್‌ ಅಬ್ದುಲ್‌ ಅಜಂ ಖಾನ್‌
ಮೊಹಮ್ಮದ್‌ ಅಬ್ದುಲ್‌ ಅಜಂ ಖಾನ್‌   

ಅಲಹಾಬಾದ್‌ : ಸಂಸದ ಅಜಂ ಖಾನ್‌ ಪುತ್ರ ಮಹಮ್ಮದ್‌ ಅಬ್ದುಲ್ಲಾ ಅಜಂ ಖಾನ್‌ 2017ರಲ್ಲಿ ವಿಧಾನಸಭೆಗೆ ಆಯ್ಕೆಯಾದಾಗ, ಚುನಾವಣೆಗೆ ಸ್ಪರ್ಧಿಸುವ ವಯಸ್ಸು ಆಗಿರಲಿಲ್ಲ ಎಂಬ ಆಧಾರದಲ್ಲಿ ಹೈಕೋರ್ಟ್‌ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ.

ಸುಅರ್ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಬಿಎಸ್‌ಪಿಯ ನವಾಬ್ ಕಜಿಂ ಅಲಿ ಖಾನ್‌ ಅವರ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಪಿ.ಕೇಸರ್‌ವಾನಿ ನೇತೃತ್ವದ ಪೀಠ ಈ ಕುರಿತು ಆದೇಶ ನೀಡಿತು.

ಫೆಬ್ರುವರಿ 15ರಂದು ಮತದಾನ ನಡೆದಿತ್ತು. ಮಾರ್ಚ್ 11ರಂದು ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿತ್ತು.

ADVERTISEMENT

‘ನಿಯಮಾನುಸಾರ ಚುನಾವಣೆಗೆ ಸ್ಪರ್ಧಿಸಲು 25 ವರ್ಷವಾಗಿರಬೇಕು. ನಾಮಪತ್ರ ಸಲ್ಲಿಸಿದಾಗ ಅಬ್ದುಲ್ಲಾ ಖಾನ್ ಅವರಿಗೆ ಅಷ್ಟು ವರ್ಷ ಆಗಿರಲಿಲ್ಲ. ಅವರ ಜನ್ಮದಿನಾಂಕ ಜ. 1, 1993’ ಎಂದು ಕಜಿಂ ವಾದಿಸಿದ್ದರು.ಪೂರಕವಾಗಿ ಶೈಕ್ಷಣಿಕ ದಾಖಲೆ, ಪಾಸ್‌ಪೋರ್ಟ್, ವೀಸಾ ಹಾಜರುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.