ADVERTISEMENT

ಶ್ರೀನಗರ: ಜೂನ್‌ 28ರಿಂದ ಅಮರನಾಥ ಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 15:08 IST
Last Updated 13 ಮಾರ್ಚ್ 2021, 15:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ದಕ್ಷಿಣ ಕಾಶ್ಮೀರ ಹಿಮಾಲಯದ 52 ದಿನಗಳ ಪವಿತ್ರ ಅಮರನಾಥ ಯಾತ್ರೆಯು ಜೂನ್‌ 28ರಂದು ಆರಂಭವಾಗಲಿದೆ. ಆಗಸ್ಟ್‌ 22ರಂದು ಯಾತ್ರೆ ಅಂತ್ಯವಾಗಲಿದೆ.

3,880 ಮೀಟರ್‌ ಎತ್ತರದಲ್ಲಿನ ನೈಸರ್ಗಿಕ ಮಂಜಿನ ಶಿವಲಿಂಗ ದರ್ಶನದ ಯಾತ್ರೆಯು ಕಳೆದ ವರ್ಷ ಕೋವಿಡ್‌ ಬಿಕ್ಕಟ್ಟು ಕಾರಣದಿಂದ ಸ್ಥಗಿತಗೊಂಡಿತ್ತು. ಹಾಗೇ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದು ಕಾರಣದಿಂದ ಉಂಟಾದ ಗಲಾಭೆ ಕಾರಣದಿಂದ 2019ರಲ್ಲೂ ಸಹ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.

ಅಮರನಾಥ ಯಾತ್ರೆ ಆರಂಭಿಸುವ ಬಗ್ಗೆ ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕೋವಿಡ್‌ 19 ಮಾರ್ಗಸೂಚಿ ಪ್ರಕಾರವೇ ಯಾತ್ರೆಯನ್ನು ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.