ADVERTISEMENT

ಶಸ್ತ್ರಾಸ್ತ್ರ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ

ಪಿಟಿಐ
Published 10 ಅಕ್ಟೋಬರ್ 2019, 18:23 IST
Last Updated 10 ಅಕ್ಟೋಬರ್ 2019, 18:23 IST
   

ನವದೆಹಲಿ: ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.

ನಿಷೇಧಿತ ಶಸ್ತ್ರಾಸ್ತ್ರಗಳನ್ನು ತಯಾರಿಸುವವರು ಹಾಗೂ ಅವುಗಳನ್ನು ಹೊಂದಿರುವವರು ಜೀವನಪೂರ್ತಿ ಜೈಲಿನಲ್ಲಿ ಕಳೆಯುವಂತಹ ಶಿಕ್ಷೆ ವಿಧಿಸಲು ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಲೈಸನ್ಸ್‌ ಇರುವ, ಒಂದಕ್ಕಿಂತ ಹೆಚ್ಚು ಬಂದೂಕು ಹೊಂದಿರುವುದನ್ನು ನಿಷೇಧಿಸಲಾಗುವುದು. ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರು ಮೂರನೇ ಅಥವಾ ಹೆಚ್ಚುವರಿ ಬಂದೂಕನ್ನು ಸಂಬಂಧಪಟ್ಟ ಸರ್ಕಾರಿ ಕಚೇರಿಗೆ ಒಪ್ಪಿಸಬೇಕು ಎಂಬ ಅಂಶವೂ ಕರಡು ಮಸೂದೆಯಲ್ಲಿ ಇದೆ.

ADVERTISEMENT

ಶಸ್ತ್ರಾಸ್ತ್ರಗಳು ಹಾಗೂ ಅವುಗಳ ಬಿಡಿಭಾಗಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದು, ಸಂಘಟಿತ ಅಪರಾಧ, ಉತ್ಸವ ಮತ್ತಿತರ ಆಚರಣೆ ಸಂದರ್ಭದಲ್ಲಿ ಗುಂಡು ಹಾರಿಸುವುದನ್ನು ನಿಷೇಧಿಸುವಂತಹ ಅಂಶಗಳೂ ಸೇರಿವೆ ಎಂದು ಇವೇ ಮೂಲಗಳು ಹೇಳಿವೆ.

ಅಂಕಿ–ಅಂಶ

35 ಲಕ್ಷ –ದೇಶದಲ್ಲಿರುವ ಬಂದೂಕು ಲೈಸನ್ಸ್‌ಗಳ ಸಂಖ್ಯೆ

13 ಲಕ್ಷ –ಉತ್ತರ ಪ್ರದೇಶದಲ್ಲಿ ಲೈಸನ್ಸ್‌ಗಳ ಸಂಖ್ಯೆ

3.7 ಲಕ್ಷ – ಜಮ್ಮು–ಕಾಶ್ಮೀರದಲ್ಲಿ ಲೈಸನ್ಸ್‌ ಹೊಂದಿರುವವರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.