ADVERTISEMENT

ವಿವಾದ ಸೃಷ್ಟಿಸಿದ ಕೊಟ್ಲರ್‌ ಪ್ರಶಸ್ತಿ: ಸ್ವಷ್ಟನೆ

ಪಿಟಿಐ
Published 16 ಜನವರಿ 2019, 19:23 IST
Last Updated 16 ಜನವರಿ 2019, 19:23 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪ್ರದಾನ ಮಾಡಲಾದ ಅಮೆರಿಕದ ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿ ಕುರಿತು ವಿವಾದ ಭುಗಿಲೆದ್ದಿದೆ.

ಪ್ರಶಸ್ತಿ ವಿಶ್ವಾಸಾರ್ಹತೆಯ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಂದೇಹ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರಶಸ್ತಿ ಸ್ಥಾಪಕ ಫಿಲಿಪ್‌ ಕೋಟ್ಲರ್ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

ADVERTISEMENT

ಪ್ರಶಸ್ತಿ ಕುರಿತು ಉದ್ಭವಿಸಿದ್ದ ಸಂದೇಹಗಳನ್ನು ಹೋಗಲಾಡಿಸಲು ಅವರು ಯತ್ನಿಸಿದ್ದಾರೆ. ಪ್ರಶಸ್ತಿ ಮಾನದಂಡಗಳನ್ನು ಕೂಡ ವಿವರಿಸಿದ್ದಾರೆ.

ಅಮೆರಿಕದ ನಾರ್ತ್‌ ವೆಸ್ಟರ್ನ್ ಯುನಿವರ್ಸಿಟಿಯ ಕೆಲ್ಲಾಗ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಮಾರ್ಕೆಟಿಂಗ್‌ ಪ್ರಾಧ್ಯಾಪಕರಾಗಿರುವ ಫಿಲಿಪ್‌ ಕೋಟ್ಲರ್‌ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಕೋಟ್ಲರ್‌ ಅವರೇ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

‘ಮೋದಿ ಅವರು ಪ್ರಧಾನಿಯಾದ ನಂತರ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ. ಮೋದಿ ಅವರ ಈ ಸಾಧನೆಯನ್ನು ಪರಿಗಣಿಸಿ ಆಯ್ಕೆ ಸಮಿತಿ ಸದಸ್ಯರು ಅವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದ್ದಾರೆ. ಆದರೆ, ಅಂತಿಮ ಆಯ್ಕೆ ಮಾತ್ರ ನನ್ನದಾಗಿತ್ತು’ ಎಂದು ಕೋಟ್ಲರ್‌ ಸ್ಪಷ್ಟನೆ ನೀಡಿದ್ದಾರೆ.

ಅನಾರೋಗ್ಯದ ನಿಮಿತ್ತ ಕೋಟ್ಲರ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದರು. ಅವರ ಪರವಾಗಿ ಜಾರ್ಜಿಯಾದ ಎಮೋರಿ ವಿವಿಯ ಜಗದೀಶ್‌ ಸೇಠ್‌ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.