ADVERTISEMENT

ಅಧಿಕಾರಶಾಹಿ ಕಾರ್ಯವೈಖರಿ: ಸಚಿವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:11 IST
Last Updated 4 ಸೆಪ್ಟೆಂಬರ್ 2022, 16:11 IST

ಭೋಪಾಲ್:ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿಕಟವರ್ತಿಗಳಾದ ಮಧ್ಯಪ್ರದೇಶದ ಇಬ್ಬರು ಸಚಿವರು ರಾಜ್ಯ ಅಧಿಕಾರಶಾಹಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವುದು ಆಡಳಿತಾರೂಢ ಬಿಜೆಪಿಗೆ ಮುಜುಗರಕ್ಕೀಡು ಮಾಡಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಬಲ ಎದುರಾಳಿ ಎಂದು ಬಿಂಬಿಸಲ್ಪಟ್ಟಿರುವ ಸಿಂಧಿಯಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾ ವಿಜಯವರ್ಗಿಯ ನಡುವಿನ ಬಾಂಧವ್ಯದ ಬಗ್ಗೆ ರಾಜ್ಯ ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಅಶೋಕ್ ನಗರ ಜಿಲ್ಲೆಯ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಆರೋಗ್ಯ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಅವರು ರಾಜ್ಯ ಸಹಕಾರ ಸಂಘಗಳ ಆಯುಕ್ತರು ಹಾಗೂ ಸ್ಥಳೀಯ ಕಲೆಕ್ಟರ್‌ಗೆ ಪತ್ರ ಬರೆದಿದ್ದಾರೆ.

ADVERTISEMENT

ಜಿಲ್ಲಾಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿರುವ ಯಾದವ್, ‘ಅಕ್ರಮ ನೇಮಕಾತಿಗಳ ಬಗ್ಗೆ ಡೆಪ್ಯೂಟಿ ಕಲೆಕ್ಟರ್‌ರಿಂದ ತನಿಖೆ ನಡೆಸುವಂತೆ’ ಕೋರಿದ್ದಾರೆ.

ಗುನಾದಲ್ಲಿ ಮಾಧ್ಯದವರ ಜತೆ ಮಾತನಾಡಿದಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ, ಆಡಳಿತ ಸಮರ್ಪಕವಾಗಿಲ್ಲ. ಇದಕ್ಕೆ ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಬೈನ್ಸ್ ಕಾರಣ’ ಎಂದು ಟೀಕಿಸಿದ್ದಾರೆ.ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಅನುಮೋದನೆಯಿಲ್ಲದೆ ಕೆಲ ಇನ್‌ಸ್ಪೆಕರ್‌ಗಳನ್ನು ವರ್ಗಾವಣೆ ಮಾಡಿರುವ ಬಗ್ಗೆಯೂ ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.