ಸೀತಾಮಡಿ (ಬಿಹಾರ),: ‘ಒಳನುಸುಳುಕೋರರಿಗೆ ಮತದಾನದ ಹಕ್ಕು ಇಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಇಲ್ಲಿ ಹೇಳಿದರು.
ಜಿಲ್ಲೆಯ ಪುನೌರಾಧಾಮದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್– ಆರ್‌ಜೆಡಿ ಮೈತ್ರಿಕೂಟದ ನಿಲುವಿನ ವಿರುದ್ಧ ಹರಿಹಾಯ್ದರು.
‘ಮತದಾರರ ಪಟ್ಟಿಯಿಂದ ನುಸುಳುಕೋರರ ಹೆಸರುಗಳನ್ನು ತೆಗೆಯಲಾಗುತ್ತಿದೆ. ಅವರಿಗೆ ಮತ ಚಲಾಯಿಸುವ ಹಕ್ಕು ಇಲ್ಲ. ಆದರೆ, ನುಸುಳುಕೋರರ ಹೆಸರಗಳನ್ನು ಮತದಾರರ ಪಟ್ಟಿಯಿಂದ ತೆಗೆಯುತ್ತಿರುವುದರಿಂದಲೇ ಆರ್‌ಜೆಡಿ ಮತ್ತು ಕಾಂಗ್ರೆಸ್ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ವಿರೋಧಿಸುತ್ತಿವೆ‘ ಎಂದು ಟೀಕಿಸಿದರು.
‘ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಎಸ್‌ಐಆರ್ ಅನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಇದೇ ಸಂದರ್ಭ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.