ADVERTISEMENT

ತಿಲಕರ ಬಗೆಗಿನ ಓದು ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ: ಅಮಿತ್ ಶಾ

ಏಜೆನ್ಸೀಸ್
Published 1 ಆಗಸ್ಟ್ 2020, 8:28 IST
Last Updated 1 ಆಗಸ್ಟ್ 2020, 8:28 IST
ಕೇಂದ್ರ ಗೃಹಸಚಿವ ಅಮಿತ್‌ ಶಾ
ಕೇಂದ್ರ ಗೃಹಸಚಿವ ಅಮಿತ್‌ ಶಾ   

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್‌ ಅವರ ನೂರನೇ ವರ್ಷದಪುಣ್ಯಸ್ಮರಣೆ ದಿನದಂದು ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್‌ ಶಾ,ತಿಲಕರ ಬಗೆಗಿನ ಓದು ಬದುಕಿನ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ಹೇಳಿದ್ದಾರೆ.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಆಯೋಜಿಸಿದ್ದ‘ಲೋಕಮಾನ್ಯ ತಿಲಕ್‌; ಸ್ವರಾಜ್‌ದಿಂದ ಆತ್ಮನಿರ್ಭರ‌ ಭಾರತದೆಡೆಗೆ’ ವೆಬಿನಾರ್‌ನಲ್ಲಿ ತಿಲಕರಿಗೆಗೌರವ ಸಲ್ಲಿಸಿ ಮಾತನಾಡಿದರು.‘100 ವರ್ಷಗಳ ಹಿಂದೆ ಒಂದು ಶ್ರೇಷ್ಠ ಆತ್ಮವನ್ನು ಕಳೆದುಕೊಂಡ ದಿನವಿದು. ಇಡೀ ದೇಶದ ಪರವಾಗಿ ನಾನು ತಿಲಕರ ಆತ್ಮಕ್ಕೆ ಗೌರವ ಸಲ್ಲಿಸುತ್ತೇನೆ. ದೇಶ ಹಾಗೂ ಅದರ ಇತಿಹಾಸದ ಬಗ್ಗೆ ಏನನ್ನಾದರೂ ತಿಳಿದುಕೊಳ್ಳಲು ಬಯಸುವುದಾದರೆ, ತಿಲಕ್‌ ಮಹಾರಾಜ್‌ಜೀ ಬಗ್ಗೆ ಓದುವಂತೆನಾನು ದೇಶದ ಯುವಕರಲ್ಲಿ ಮನವಿ ಮಾಡುತ್ತೇನೆ’ ಎಂದಿದ್ದಾರೆ.

ಮುಂದುವರಿದು, ‘ಅವರು ಹುತಾತ್ಮರಾಗಿ ನೂರು ವರ್ಷಗಳು ಕಳೆದಿವೆ. ಆದರೆ, ಇಂದಿಗೂ.. ಇಂದಿಗೂ ಸಹ ಅವರ ವ್ಯಕ್ತಿತ್ವ, ಕೆಲಸ ಮತ್ತು ಚಿಂತನೆಗಳು ಅಂದಿನಂತೆಯೇ ಪ್ರಸ್ತುತವಾಗಿದೆ. ಅವರು ದೂರದೃಷ್ಟಿಯುಳ್ಳ ನಾಯಕರಾಗಿದ್ದರು ಎಂಬುದನ್ನು ಇವೆಲ್ಲವೂ ತೋರುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಜೀವನದಲ್ಲಿ ಒಮ್ಮೆಯಾದರೂ ತಿಲಕರ ಆತ್ಮಚರಿತ್ರೆಯನ್ನು ಓದಬೇಕು ಎಂದು ದೇಶದ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅದರಿಂದ ಜೀವನದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಮಾತ್ರವಲ್ಲದೆ, ಅದು ಇಂದಿನ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲದು’ ಎಂದಿದ್ದಾರೆ.

‘ಸ್ವರಾಜ್‌ ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ಪಡೆಯಲೇಬೇಕು’ ಎಂಬ ಅವರ ಮಾತು ಸ್ವಾತಂತ್ರ್ಯ ಹೋರಾಟದೊಂದಿಗೆ ಸುವರ್ಣಾಕ್ಷರಗಳಾಗಿ ಉಳಿದುಕೊಂಡಿದೆ ಎಂದೂ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದ ವೇಳೆ ‘ಸ್ವರಾಜ್‌ ನನ್ನ ಜನ್ಮಸಿದ್ಧ ಹಕ್ಕು..’ ಎಂದು ತಿಲಕರು. ಅದನ್ನು ಸಾಧಿಸಲು ಜೀವನದುದ್ದಕ್ಕೂ ಹೋರಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.