ADVERTISEMENT

ಅಮಿತಾಭ್ ಬಚ್ಚನ್‌ಗೆ ಎರಡನೇ ಬಾರಿ ಕೋವಿಡ್–19

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2022, 2:57 IST
Last Updated 24 ಆಗಸ್ಟ್ 2022, 2:57 IST
ಅಮಿತಾಭ್ ಬಚ್ಚನ್‌
ಅಮಿತಾಭ್ ಬಚ್ಚನ್‌   

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಕೋವಿಡ್–19 ದೃಢಪಟ್ಟಿದೆ.

ಈ ಕುರಿತು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ತಮ್ಮ ಸಂಪರ್ಕದಲ್ಲಿದ್ದವರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

‘ನನಗೆ ಕೋವಿಡ್ ದೃಢಪಟ್ಟಿದೆ. ನನ್ನ ಜತೆಗೆ ಇದ್ದವರು ಹಾಗೂ ಸಂಪರ್ಕಕ್ಕೆ ಬಂದಿದ್ದವರೆಲ್ಲ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಮಿತಾಭ್ ಬಚ್ಚನ್ ಅವರಿಗೆ ಕೋವಿಡ್ ತಗುಲಿರುವುದು ಇದು ಎರಡನೇ ಬಾರಿ. 2020ರ ಜುಲೈನಲ್ಲಿ ಅವರಿಗೆ ಸೋಂಕು ತಗುಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.