ADVERTISEMENT

ವಿಷಯುಕ್ತ ಮದ್ಯ: ಸಾವು 27ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:35 IST
Last Updated 15 ಮೇ 2025, 16:35 IST
<div class="paragraphs"><p>ಮಹಿಳೆ ಸಾವು</p></div>

ಮಹಿಳೆ ಸಾವು

   

(ಪ್ರಾತಿನಿಧಿಕ ಚಿತ್ರ)

ಅಮೃತಸರ(ಪಿಟಿಐ): ಪಂಜಾಬ್‌ನ ಅಮೃತಸರದಲ್ಲಿ ವಿಷಯುಕ್ತ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಮಜಿಠೀರಿಯಾ ಪ್ರದೇಶದಲ್ಲಿ ಮತ್ತೆ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ADVERTISEMENT

ಮೃತರು ಭಾಂಗ್ವಾನ್ ಮತ್ತು ಗಲೋವಲಿ ಕುಲಿಯನ್ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಗುರುವಾರ ಪಂಜಾಬ್ ಸಚಿವ ಕುಲದೀಪ ಸಿಂಗ್ ಧಾಲಿವಾಲ್‌ ತಲಾ ₹10 ಲಕ್ಷದ ಪರಿಹಾರ ಚೆಕ್‌ ವಿತರಣೆ ಮಾಡಿದರು. ‘ಅಸ್ವಸ್ಥರಿಗೆ ಉಚಿತ ಚಿಕಿತ್ಸೆ ಜೊತೆಗೆ ₹ 2 ಲಕ್ಷ ನೆರವು ನೀಡಲಾಗುತ್ತಿದೆ. ಪ್ರಕರಣ ಸಂಬಂಧ 16 ಜನರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ’ ಎಂದು ಸಚಿವರು ತಿಳಿಸಿದರು.

ಎಥೆನಾಲ್ ಬದಲಿಗೆ ಕೈಗಾರಿಕೆಗಳಿಗೆ ಬಳಸುವ ಮೆಥೆನಾಲ್ ರಾಸಾಯನಿಕವನ್ನು ಮತ್ತು ಬರಿಸುವ ಉದ್ದೇಶಕ್ಕೆ ಬಳಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.