ADVERTISEMENT

ಅಂಡಮಾನ್‌ ಪ್ರವಾಸೋದ್ಯಮ ವೃದ್ಧಿಗೆ ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 16:13 IST
Last Updated 6 ಸೆಪ್ಟೆಂಬರ್ 2025, 16:13 IST
ಅಂಡಮಾನ್ ದ್ವೀಪ
ಅಂಡಮಾನ್ ದ್ವೀಪ   

ಪೋರ್ಟ್‌ ಬ್ಲೇರ್: ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯವು (ಎಮ್‌ಒಎಸ್‌ಪಿಐ) ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ‘ದೇಶೀಯ ಪ್ರವಾಸೋದ್ಯಮ ವೆಚ್ಚ ಸಮೀಕ್ಷೆ’ಯನ್ನು (ಡಿಟಿಇಎಸ್‌) ಆರಂಭಿಸಿದೆ. 

ಉತ್ತಮ ಪ್ರವಾಸೋದ್ಯಮ ನೀತಿಗಳು ಹಾಗೂ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ದೇಶೀಯ ಪ್ರವಾಸಗಳಿಗೆ ಸಂಬಂಧಿಸಿದಂತೆ ಖರ್ಚು ವೆಚ್ಚ, ವಸತಿ, ಸಾರಿಗೆ, ಆಹಾರ ಮತ್ತು ಪ್ರವಾಸಿಗರ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಈ ಸಮೀಕ್ಷೆಯನ್ನು ಆರಂಭಿಸಲಾಗಿದೆ. ಇದು ಪ್ರವಾಸೋದ್ಯಮ ಇಲಾಖೆಗೆ, ಯೋಜನೆ ತಯಾರಿಸಲು ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ಪ್ರವಾಸದ ಮಾದರಿಗಳು ಹಾಗೂ ಪ್ರಯಾಣಿಕರ ವೆಚ್ಚದ ಕುರಿತು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಮೀಕ್ಷೆಯು ಸಹಾಯ ಮಾಡುತ್ತದೆ’ ಎಂದು ಮಾಹಿತಿ, ಪ್ರಚಾರ ಮತ್ತು ಪ್ರವಾಸೋದ್ಯಮ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಪೋರ್ಟ್‌ ಬ್ಲೇರ್‌ನಲ್ಲಿರುವ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಕ್ಷೇತ್ರ ಕಾರ್ಯಾಚರಣೆ ವಿಭಾಗದೊಂದಿಗೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವೂ ಸಮೀಕ್ಷೆಯಲ್ಲಿ ಭಾಗಿಯಾಗಲಿದೆ. ಸಮೀಕ್ಷೆಯು ಜೂನ್‌ 2026ರವರೆಗೆ ಮುಂದುವರಿಯಲಿದೆ.

2024ರಲ್ಲಿ ಅಂಡಮಾನ್‌ನ ದೇಶಿಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 120ರಷ್ಟು ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 27ರಷ್ಟು ಹೆಚ್ಚಳವಾಗಿದೆ.

ವಿಶ್ವ ದರ್ಜೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನೆ  ಪ್ರವಾಸ, ಪ್ರವಾಸಿಗರ ಕುರಿತು ಮಾಹಿತಿ ಕಲೆ ಹಾಕಲು ಸಮೀಕ್ಷೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.