ADVERTISEMENT

ಉಚಿತ ಸೇವೆ: ‘ತಾಯಿ–ಮಗು ಎಕ್ಸ್‌ಪ್ರೆಸ್‌’ ವಾಹನಗಳಿಗೆ ಆಂಧ್ರ ಸಿಎಂ ಜಗನ್‌ ಚಾಲನೆ

ಐಎಎನ್ಎಸ್
Published 1 ಏಪ್ರಿಲ್ 2022, 11:17 IST
Last Updated 1 ಏಪ್ರಿಲ್ 2022, 11:17 IST
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ   

ಅಮರಾವತಿ: 500 ಹವಾ ನಿಯಂತ್ರಿತ (ಎ.ಸಿ) ‘ತಾಯಿ–ಮಗು ಎಕ್ಸ್‌ಪ್ರೆಸ್‌’ ವಾಹನಗಳಿಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಚಾಲನೆ ನೀಡಿದ್ದಾರೆ.

ಗರ್ಭಿಣಿ ಮಹಿಳೆಯರು, ತಾಯಿ– ಮಗುವನ್ನು ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲು ಈ ಯೋಜನೆಯನ್ನು ಜಾರಿ ತರಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನಮ್ಮ ಸರ್ಕಾರ ಪ್ರಾರಂಭದಿಂದಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ. ತಾಯಿ –ಮಗುವಿನ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೆ ತರಲಾಗಿದೆ ಎಂದು ಜಗನ್‌ ಮೋಹನ್‌ ರೆಡ್ಡಿ ತಿಳಿಸಿದ್ದಾರೆ.

ADVERTISEMENT

ಈ ಹಿಂದೆ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಆರೋಗ್ಯ ಸೇವೆಗಳತ್ತ ಗಮನ ಹರಿಸುವಲ್ಲಿ ವಿಫಲವಾಗಿತ್ತು. ಆದರೆ, ನಮ್ಮ ಸರ್ಕಾರ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜತೆಗೆ, 104 ಮತ್ತು 108 ಸೇವೆಗಳಿಗೆ ಹೊಸ ಚೈತನ್ಯ ತುಂಬಲಾಗುವುಗು ಎಂದು ಹೇಳಿದ್ದಾರೆ.

ಸರ್ಕಾರದ ವತಿಯಿಂದ ‘ಆರೋಗ್ಯ ಆಸರೆ’ ಯೋಜನೆಯಡಿಯಲ್ಲಿಸಿಸೇರಿಯನ್ ಹೆರಿಗೆಗೆ ₹3000 ಮತ್ತು ಸಾಮಾನ್ಯ ಹೆರಿಗೆಗೆ ₹5,000 ಸಹಾಯಧನ ನೀಡಲಾಗುವುದು. ಜತೆಗೆ,ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಮಾಣೀಕೃತ ಔಷಧಗಳ ಜೊತೆಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಗನ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.