ADVERTISEMENT

ಆಂಧ್ರದ ₹3,500 ಕೋಟಿ ಮದ್ಯ ಹಗರಣ; ಕರ್ನಾಟಕ ಸೇರಿ 20 ಕಡೆ ಇ.ಡಿ ದಾಳಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 9:20 IST
Last Updated 18 ಸೆಪ್ಟೆಂಬರ್ 2025, 9:20 IST
<div class="paragraphs"><p>ಇ.ಡಿ</p></div>

ಇ.ಡಿ

   

ಹೈದರಾಬಾದ್: ಆಂಧ್ರ ಪ್ರದೇಶದ ₹3,500 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು(ಇ.ಡಿ) ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿದೆ.

ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ದೆಹಲಿ–ಎನ್‌ಸಿಆರ್‌ನಲ್ಲಿ ಈ ಸಂಬಂಧಿತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ದಾಳಿ ನಡೆದಿದೆ.

ADVERTISEMENT

ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅರೆಟೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಶ್ರೀ ಜ್ಯುವೆಲ್ಲರ್ಸ್ ಎಕ್ಸಿಂಪ್, ಎನ್. ಆರ್. ಉದ್ಯೋಗ್ ಎಲ್. ಎಲ್. ಪಿ; ದಿ ಇಂಡಿಯಾ ಫ್ರೂಟ್ಸ್ ಪ್ರೈವೇಟ್ ಲಿಮಿಟೆಡ್ (ಚೆನ್ನೈ), ವೆಂಕಟೇಶ್ವರ ಪ್ಯಾಕೇಜಿಂಗ್, ಸುವರ್ಣ ದುರ್ಗಾ ಬಾಟಲ್ಸ್, ರಾವ್ ಸಾಹೇಬ್ ಬೂರುಗು ಮಹಾದೇವ್ ಜ್ಯುವೆಲ್ಲರ್ಸ್, ಉಶೋದಯ ಎಂಟರ್‌ಪ್ರೈಸಸ್ ಮತ್ತು ಮೋಹನ್ ಲಾಲ್ ಜ್ಯುವೆಲ್ಲರ್ಸ್ (ಚೆನ್ನೈ) ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.