ಜಪ್ತಿ ಮಾಡಿದ ಹಣ
ಅಮರಾವತಿ/ ಹೈದರಾಬಾದ್: ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ ಎನ್ನಲಾದ ₹3,500 ಕೋಟಿ ಮೊತ್ತದ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಹೈದರಾಬಾದ್ ಬಳಿಯ ತೋಟದ ಮನೆಯಿಂದ ₹11 ಕೋಟಿ ನಗದನ್ನು ಜಪ್ತಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಗರಣ ಪ್ರಕರಣದಲ್ಲಿ ಆರೋಪಿ 40 (ಎ-40) ಎಂದು ಪಟ್ಟಿ ಮಾಡಲಾದ ವರುಣ್ ಪುರುಷೋತ್ತಮ್ ಎನ್ನುವಾತ ತನ್ನ ಪಾತ್ರವನ್ನು ತಪ್ಪೊಪ್ಪಿಕೊಂಡಿದ್ದಾನೆ. ಜತಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದು ದಾಳಿಗೆ ಕಾರಣವಾಯಿತು. ಇದರಿಂದ ಅಪಾರ ಪ್ರಮಾಣದ ಹಣವನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರ ಹೇಳಿಕೆ ಉಲ್ಲೇಖಿಸಿ ವರದಿ ತಿಳಿಸಿದೆ.
ಈ ಹಗರಣವು ಸಾವಿರಾರು ಕೋಟಿ ರೂಪಾಯಿಗಳದ್ದಾಗಿದ್ದು, ನಕಲಿ ಕಂಪನಿಗಳು, ಲಂಚ ಮತ್ತು ರಾಜಕೀಯ ನಾಯಕರ ಜಾಲವನ್ನು ಜಾಲವನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಸದ್ಯದಲ್ಲೇ ಕೆಲವರನ್ನು ಬಂಧಿಸುವ ಕೆಲಸ ಆಗಲಿದೆ. ಇತ್ತೀಚೆಗೆ ನಡೆಸಿದ ದಾಳಿಗಳಲ್ಲಿ ಬಹಿರಂಗಗೊಂಡ ಹಣಕಾಸಿನ ವಹಿವಾಟುಗಳು ಮತ್ತು ರಾಜಕೀಯ ಸಂಪರ್ಕಗಳನ್ನು ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.
2018 ಮತ್ತು 2024 ರ ನಡುವೆ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಅಬಕಾರಿ ಹಗರಣ ನಡೆದಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.