ADVERTISEMENT

ಪ್ರಧಾನಿ ಜೊತೆ ಆಂಧ್ರ ಸಿ.ಎಂ ಭೇಟಿ ಅಭಿವೃದ್ಧಿ ಯೋಜನೆಗಳ ಚರ್ಚೆ

ಪಿಟಿಐ
Published 6 ಅಕ್ಟೋಬರ್ 2020, 16:22 IST
Last Updated 6 ಅಕ್ಟೋಬರ್ 2020, 16:22 IST
ಜಗನ್‌ ಮೋಹನ್‌ ರೆಡ್ಡಿ
ಜಗನ್‌ ಮೋಹನ್‌ ರೆಡ್ಡಿ   

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ರಾಜ್ಯದ ಬಾಕಿ ಉಳಿದಿರುವ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿದರು. ಪೊಲವರಂ ನೀರಾವರಿ ಯೋಜನೆಗೆ ಬಾಕಿ ಇರುವ ಆರ್ಥಿಕ ನೆರವು ಕುರಿತಂತೆಯೂ ಮಾತುಕತೆ ನಡೆಸಿದರು.

ಜಗನ್‌ಮೋಹನ್ ರೆಡ್ಡಿ ಅವರು ಎನ್‌ಡಿಎ ಮೈತ್ರಿಕೂಟವನ್ನು ಸೇರಬಹುದು ಎಂಬ ಬಲವಾದ ವದಂತಿ ಇರುವಂತೆಯೇ ಈ ಭೇಟಿ ನಡೆದಿದೆ. ಆದರೆ, ಭೇಟಿ ಸಂದರ್ಭದಲ್ಲಿ ರಾಜಕೀಯ ವಿಷಯವೂ ಚರ್ಚೆಯಾಯಿತೇ ಎಂಬುದು ಸ್ಪಷ್ಟವಾಗಿಲ್ಲ.

40 ನಿಮಿಷ ಮಾತುಕತೆ ನಡೆಯಿತು. ಬಾಕಿ ಕಂದಾಯ ಅನುದಾನ ₹ 10,000 ಕೋಟಿ, ಪೊಲವರಂ ಯೋಜನೆಗಾಗಿ ₹ 3,250 ಕೋಟಿ ಅನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಕರ್ನೂಲು ಜಿಲ್ಲೆಯಲ್ಲಿ ಹೈಕೋರ್ಟ್‌ ಸ್ಥಾಪಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ, ಪ್ರಧಾನಿ ಅವರ ಗಮನಸೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.