ADVERTISEMENT

ಮದ್ಯ ನೀತಿ ವಿರೋಧಿಸಿ 14ರಿಂದ ಅಣ್ಣಾ ಹಜಾರೆ ನಿರಶನ

ಪಿಟಿಐ
Published 9 ಫೆಬ್ರುವರಿ 2022, 14:23 IST
Last Updated 9 ಫೆಬ್ರುವರಿ 2022, 14:23 IST
ಅಣ್ಣಾ ಹಜಾರೆ
ಅಣ್ಣಾ ಹಜಾರೆ   

ಪುಣೆ: ಸೂಪರ್‌ ಮಾರ್ಕೆಟ್‌ ಮತ್ತು ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮಹಾರಾಷ್ಟ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಇದೇ ತಿಂಗಳ 14 ರಿಂದ ಅನಿರ್ದಿಷ್ಟ ಅವಧಿಯ ತನಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಬುಧವಾರ ಹೇಳಿದ್ದಾರೆ.

‘ಈ ಸಂಬಂಧ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವ ನೀತಿಯನ್ನು ತಕ್ಷಣವೇ ಹಿಂ‍ಪಡೆಯಬೇಕೆಂದು ರಾಜ್ಯದ ಜನರು ಒತ್ತಾಯಿಸಿದ್ದಾರೆ’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

‘ಈ ಸಮಸ್ಯೆಯನ್ನುದ್ದೇಶಿಸಿ ಉದ್ಧವ್‌ ಠಾಕ್ರೆ ಅವರಿಗೆ ಈವರೆಗೆ ಎರಡು ಪತ್ರಗಳನ್ನು ಬರೆದಿದ್ದೇನೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.ಫೆ.14ರಿಂದ ಅಹ್ಮದ್ ನಗರ ಜಿಲ್ಲೆಯರಾಳೇಗಾಂವ್ ಸಿದ್ಧಿ ಗ್ರಾಮದಲ್ಲಿಅನಿರ್ದಿಷ್ಟ ಅವಧಿವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ’ ಎಂದು ಅಣ್ಣಾ ಹಜಾರೆ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.