ADVERTISEMENT

ಕೋವಿಡ್‌ ಚಿಕಿತ್ಸೆಯಲ್ಲಿ ಆ್ಯಂಟಿಬಯೊಟಿಕ್ಸ್‌ ಬಳಸಬೇಡಿ: ಕೇಂದ್ರ

ಪಿಟಿಐ
Published 20 ಮಾರ್ಚ್ 2023, 14:40 IST
Last Updated 20 ಮಾರ್ಚ್ 2023, 14:40 IST
   

ನವದೆಹಲಿ: ‘ಬ್ಯಾಕ್ಟೀರಿಯಾ ಸೋಂಕಿನ ಸಂದೇಹವಿದ್ದರೆ ಮಾತ್ರವೇ ಆ್ಯಂಟಿಬಯೊಟಿಕ್ಸ್‌ ನೀಡಬೇಕು. ಇಲ್ಲವಾದಲ್ಲಿ ಕೋವಿಡ್‌ ಪ್ರಕರಣಗಳ ಚಿಕಿತ್ಸೆಯಲ್ಲಿ ಆ್ಯಂಟಿಬಯೊಟಿಕ್ಸ್‌ ಬಳಸಬಾರದು’ ಎಂದು ಕೇಂದ್ರ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಿದೆ.

ಕೋವಿಡ್‌ ಪ್ರಕರಣಗಳಲ್ಲಿ ಇತ್ತೀಚೆಗೆ ಏರಿಕೆ ಕಂಡುಬಂದ ಕಾರಣ ವಯಸ್ಕರ ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಿದ್ದು, ಭಾನುವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲು ಏಮ್ಸ್‌/ಐಸಿಎಂಆರ್‌ ಕೋವಿಡ್‌ ರಾಷ್ಟ್ರೀಯ ಕಾರ್ಯ ಪಡೆಯು ಇದೇ ಜನವರಿ 5ರಂದು ಸಭೆ ಸೇರಿತ್ತು.

ADVERTISEMENT

* ಕೋವಿಡ್‌ ರೋಗಿಗಳಿಗೆ ಇನ್ನು ಮುಂದೆ ಪ್ಲಾಸ್ಮಾ ಚಿಕಿತ್ಸೆ ಮಾಡಬಾರದು

* ವ್ಯಕ್ತಿಯಲ್ಲಿ ಕೊರೊನಾ ಸೋಂಕಿನೊಂದಿಗೆ ಇತರೆ ಸಾಂಕ್ರಾಮಿಕ ಸೋಂಕು ಇದ್ದರೆ ಮಾತ್ರವೇ ಆ್ಯಂಟಿಬಯೊಟಿಕ್ಸ್‌ ಬಳಸಬಹುದು

* ವ್ಯಕ್ತಿಯಲ್ಲಿ ಸೋಂಕಿತ ತೀವ್ರತೆ ಹೆಚ್ಚಿದ್ದು ಮತ್ತು ಸೋಂಕು ಇನ್ನಷ್ಟು ಉಲ್ಬಣಿಸುವ ಲಕ್ಷಣಗಳಿದ್ದರೆ ಮಾತ್ರವೇ ಐದು ದಿನಗಳವರೆಗೆ ರೆಮ್ಡಿಸಿವಿರ್‌ ಮಾತ್ರೆಗಳನ್ನು ನೀಡಬಹುದು

* ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ 10 ದಿನಗಳ ಒಳಗೆ ರೆಮ್ಡಿಸಿವಿರ್‌ ಮಾತ್ರೆಗಳನ್ನು ನೀಡಬೇಕು. ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳಿಗೆ ಇದು ಅನ್ವಯ ಆಗುವುದಿಲ್ಲ

ಯಾವುದೆಲ್ಲಾ ಆ್ಯಂಟಿಬಯೊಟಿಕ್ಸ್‌ ಬಳಸಬಾರದು

* ಲೋಪಿನವಿರ್‌–ರಿಟೊನವಿರ್‌

* ಹೈಡ್ರೊಕ್ಸಿಕ್ಲೊರೊಕ್ವಿನ್‌

* ಇವರ್‌ಮೆಕ್ಟಿನ್‌

* ಮೊಲ್ನುಪಿರವಿರ್‌

* ಫವಿಪಿರವಿರ್‌

* ಅಜಿತ್ರೊಮೈಸಿನ್‌

* ಡೊಕ್ಸಿಸೈಕ್ಲಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.