ADVERTISEMENT

ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಿಟಿಐ
Published 17 ಅಕ್ಟೋಬರ್ 2025, 21:02 IST
Last Updated 17 ಅಕ್ಟೋಬರ್ 2025, 21:02 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ, ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಬೆಲ್ಜಿಯಂನ ಆ್ಯಂಟ್‌ವರ್ಪ್‌ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.

‘ಭಾರತದ ಮನವಿಗೆ ಮೇರೆ ಬೆಲ್ಜಿಯಂ ಅಧಿಕಾರಿಗಳು ಚೋಕ್ಸಿ ಅವರನ್ನು ಬಂಧಿಸಿರುವುದು ಕ್ರಮಬದ್ಧವಾಗಿದೆ ಎಂಬುದಾಗಿ ಆ್ಯಂಟ್‌ವರ್ಪ್‌ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ’ ಎಂದು ವಿದೇಶಾಂಗ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಮಾಡಿದ್ದ ಮನವಿ ಮೇರೆಗೆ, ಬೆಲ್ಜಿಯಂ ಅಧಿಕಾರಿಗಳು ಚೋಕ್ಸಿ ಅವರನ್ನು ಏಪ್ರಿಲ್‌ 11ರಂದು ಬಂಧಿಸಿದ್ದರು.

ADVERTISEMENT

‘ಚೋಕ್ಸಿ ಅವರನ್ನು ಹಸ್ತಾಂತರಿಸಿದಲ್ಲಿ, ಅವರನ್ನು ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿರಿಸಲಾಗುವುದು. ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಯುರೋಪ್‌ನ ಕಾಯ್ದೆ (ಸಿಪಿಟಿ) ಅನುಸಾರ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭಾರತವು ಬೆಲ್ಜಿಯಂಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.