ADVERTISEMENT

ಮೂರು ರಾಜಧಾನಿ:ಯಥಾಸ್ಥಿತಿ ಮುಂದುವರಿಸಲು ಕೋರ್ಟ್ ಸೂಚನೆ

ಪಿಟಿಐ
Published 21 ಸೆಪ್ಟೆಂಬರ್ 2020, 16:09 IST
Last Updated 21 ಸೆಪ್ಟೆಂಬರ್ 2020, 16:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮರಾವತಿ: ರಾಜ್ಯದಲ್ಲಿ ಮೂರು ಹೊಸ ರಾಜಧಾನಿಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಎರಡು ಹೊಸ ಕಾನೂನುಗಳ ಬಗ್ಗೆ ಅ. 5ರವರೆಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಆಂಧ್ರ ಪ್ರದೇಶ ಹೈಕೋರ್ಟ್ ಸೋಮವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿಗಳಾದ ಎ.ವಿ. ಶೇಷಸಾಯಿ, ಎಂ. ಸತ್ಯನಾರಾಯಣ ಮೂರ್ತಿ ಅವರನ್ನೊಳಗೊಂಡ ಪೀಠವು, ರೈತರ ಹಿತರಕ್ಷಣಾ ಸಮಿತಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು.

ರಾಜಧಾನಿಗಳ ರಚನೆಯ ಕುರಿತು ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಹೇಳಿದ ಕೋರ್ಟ್, ಅ. 5ಕ್ಕೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.