ನವದೆಹಲಿ: ₹780 ಕೋಟಿ ಮೌಲ್ಯದ ಅಮೆರಿಕದ ಸಿಗ್ ಸೌರ್ ಬಂದೂಕುಗಳು ಸೇರಿದಂತೆ ಒಟ್ಟು ₹2,290 ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಒಪ್ಪಿಗೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದರಕ್ಷಣಾ ಸಲಕರಣೆ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನೌಕಾಪಡೆ ಹಾಗೂ ವಾಯುಪಡೆಯ ಬಳಕೆಗೆ ₹970 ಕೋಟಿ ಮೊತ್ತದ ಆ್ಯಂಟಿ ಏರ್ಫೀಲ್ಡ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಸೇನೆ ಮತ್ತು ಐಎಎಫ್ ನಡುವೆ ಸೀಮಾತೀತ ಸಂವಹನಕ್ಕೆ ನೆರವಾಗುವ ₹540 ಕೋಟಿ ಮೌಲ್ಯದ ಹೈಫ್ರೀಕ್ವೆನ್ಸಿ ಟ್ರಾನ್ಸ್ ರಿಸೀವರ್ಗಳ ಖರೀದಿಗೂ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.