ADVERTISEMENT

ನಾಗಾಲ್ಯಾಂಡ್: 12 ಯೋಧರಿಗೆ ಕೊರೊನಾ ದೃಢ  

ಪಿಟಿಐ
Published 25 ಜೂನ್ 2020, 6:24 IST
Last Updated 25 ಜೂನ್ 2020, 6:24 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ   

ಕೊಹಿಮಾ: ನಾಗಾಲ್ಯಾಂಡ್‌ನ ಕೊಹಿಮಾ ಜಿಲ್ಲೆಯಲ್ಲಿ ಸೇನೆಯ 12 ಯೋಧರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 347ಕ್ಕೆ ಏರಿಕೆಯಾಗಿದೆ.

ಇಲ್ಲಿನ ಜಖಾಮಾ ಸೇನಾ ಕ್ಯಾಂಪ್‌ನ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ದೇಶದ ವಿವಿಧ ಭಾಗಗಳಿಂದ ಜಖಾಮಾ ಸೇನಾ ಶಿಬಿರಕ್ಕೆ ಯೋಧರ ಗುಂಪು ವಾಪಸಾಗಿತ್ತು. ಸೇನಾ ನಿಯಮಗಳ ಪ್ರಕಾರ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ಮುನ್ನ ಕ್ಯಾಂಪ್‌ನಲ್ಲಿ ಮೂವರಿಗೆ ಕೋವಿಡ್ ಇತ್ತು.

ADVERTISEMENT

ಎಲ್ಲ 15 ಸೋಂಕಿತರನ್ನು ಜಖಾಮಾದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಿಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ 15 ಜನರ ಸಂಪರ್ಕಿತರನ್ನು ಪತ್ತೆ ಹೆಚ್ಚುವ ಕೆಲಸ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.