ADVERTISEMENT

ವಿಡಿಯೋ: ಜಮ್ಮು: ಹಿಮದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಸೇನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 11:37 IST
Last Updated 21 ಡಿಸೆಂಬರ್ 2020, 11:37 IST

ಜಮ್ಮು& ಕಾಶ್ಮೀರದ ಗುರೆಜ್‌ನಿಂದ ಬಂಡಿಪೋರಾಕ್ಕೆ ತೆರಳುತ್ತಿದ್ದಾಗ ರಜ್ದಾನ್ ಹಿಮದಲ್ಲಿ ಸಿಲುಕಿಕೊಂಡಿದ್ದ 2 ಪ್ರಯಾಣಿಕರ ವಾಹನಗಳನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಮೊದಲಿಗೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಹಿಮದಲ್ಲಿ ಸಿಲುಕಿದ್ದ ವಾಹನಗಳನ್ನು ಸಹ  ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಮ್ಮು ವಿಪತ್ತು ನಿರ್ವಹಣಾ ತಂಡ ಮಾಹಿತಿ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.