ADVERTISEMENT

ನಾಗಾಲ್ಯಾಂಡ್‌ನಲ್ಲಿ ಸೆ.7ರಿಂದ 23ರ ವರೆಗೆ ಅಗ್ನಿಪಥ ಅಡಿಯಲ್ಲಿ ಸೇನಾ ನೇಮಕಾತಿ

ಪಿಟಿಐ
Published 29 ಜುಲೈ 2022, 15:01 IST
Last Updated 29 ಜುಲೈ 2022, 15:01 IST
   

ಕೋಹಿಮಾ:ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿಯು ನಾಗಾಲ್ಯಾಂಡ್‌ನದಿಮಾಪುರ ಜಿಲ್ಲೆಯಲ್ಲಿರುವ ರಂಗಪಹರ್‌ ಸೇನಾ ನೆಲೆಯಲ್ಲಿಸೆ.7ರಿಂದ 23ರ ವರೆಗೆ ನಡೆಯಲಿದೆ.

www.joinindianarmy.nic.in ವೆಬ್‌ಸೈಟ್‌ನಲ್ಲಿ ನೇಮಕಾತಿಗೆ ಸಂಬಂಧಿಸಿದ ವಿವರವಾದ ಮಾಹಿತಿ ಇದೆ ಎಂದು ರಕ್ಷಣಾ ಇಲಾಖೆಯ (ಕೋಹಿಮಾ) ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಸುಮಿತ್‌ ಕೆ.ಶರ್ಮಾ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳುಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಪ್ರಕ್ರಿಯೆ ಇನ್ನು ಐದು ದಿನಗಳಲ್ಲಿ ಆರಂಭವಾಗಲಿದೆ ಎಂದುಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಅಭ್ಯರ್ಥಿಗಳು ಯಾವ ದಿನದಂದು ಹಾಜರಾಗಬೇಕು ಎಂಬುದನ್ನು ರ‍್ಯಾಲಿ ಆರಂಭಕ್ಕೂ 10 ದಿನಗಳ ಮೊದಲು ‌ಪ್ರವೇಶ ಪತ್ರಗಳ ಮೂಲಕ ತಿಳಿಸಲಾಗುವುದು. ಹಾಗೆಯೇ, ಈ ಸಾಲಿನ ನೇಮಕಾತಿ ವರ್ಷದಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದೂಶರ್ಮಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.