ADVERTISEMENT

ಸೇನೆಯ ಸಿಬ್ಬಂದಿಗೆ ಮುಂದಿನ ವರ್ಷದಿಂದ ನೂತನ ಸಮವಸ್ತ್ರ?

ಪಿಟಿಐ
Published 2 ಡಿಸೆಂಬರ್ 2021, 12:01 IST
Last Updated 2 ಡಿಸೆಂಬರ್ 2021, 12:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಹವಾಮಾನದ ಏರಿಳಿತವನ್ನು ಎದುರಿಸಲು ಪೂರಕವಾದ ಹೊಸ ಸಮವಸ್ತ್ರವನ್ನು ಸೇನೆ ತನ್ನ ಸಿಬ್ಬಂದಿಗೆ ಮುಂದಿನ ವರ್ಷದಿಂದ ಜಾರಿಗೊಳಿಸುವ ಸಂಭವವಿದೆ.

ಮಣ್ಣು ಮತ್ತು ಹಸಿರು ಬಣ್ಣ ಮಿಶ್ರಣದ ಸಮವಸ್ತ್ರವನ್ನು, ಸಿಬ್ಬಂದಿ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಲಾಗಿದೆ.

ಡಿಜಿಟಲ್ ಕಣ್ಗಾವಲಿಗೂ ಸುಲಭವಾಗಿ ನಿಲುಕದ, ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಈ ಸಮವಸ್ತ್ರವನ್ನು ಜ.15 ರಂದು ನಡೆಯುವ ಸೇನಾ ದಿನದ ಪಥಸಂಚಲನದಲ್ಲಿ ಪ್ರದರ್ಶಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿವಿಧ ದೇಶಗಳಲ್ಲಿನ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಸಮವಸ್ತ್ರ ಅಂತಿಮಗೊಳಿಸಲಾಗಿದೆ. ಇದು, ಹೆಚ್ಚು ಬಾಳಿಕೆ ಬರಲಿದ್ದು, ಬೇಸಿಗೆ ಮತ್ತು ಚಳಿಗಾಲ ಎರಡಕ್ಕೂ ಪೂರಕವಾಗಿದೆ ಎಂದು ತಿಳಿಸಿವೆ.

ಭಾರತ ನೌಕಾಪಡೆ ಕಳೆದ ವರ್ಷವಷ್ಟೇ ತನ್ನ ಸಿಬ್ಬಂದಿಗೆ ನೂತನ ಸಮವಸ್ತ್ರ ಪರಿಚಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.