ADVERTISEMENT

ಅಮಿತ್‌ ಶಾ ಭೇಟಿಯಾದ ಅರವಿಂದ ಕೇಜ್ರಿವಾಲ್‌: ಸಮಾಲೋಚನೆ ಫಲಪ್ರದ ಎಂದು ಟ್ವೀಟ್‌ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:23 IST
Last Updated 19 ಫೆಬ್ರುವರಿ 2020, 11:23 IST
ಗೃಹ ಸಚಿವ ಅಮಿತ್‌ ಶಾ ಭೇಟಿಗಾಗಿ ಅವರ ಗೃಹ ಕಚೇರಿಗೆ ತೆರಳುತ್ತಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌
ಗೃಹ ಸಚಿವ ಅಮಿತ್‌ ಶಾ ಭೇಟಿಗಾಗಿ ಅವರ ಗೃಹ ಕಚೇರಿಗೆ ತೆರಳುತ್ತಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌    

ನವದೆಹಲಿ: ಅರವಿಂದ ಕೇಜ್ರಿವಾಲ್‌ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬುಧವಾರ ಅವರ ಗೃಹ ಕಚೇರಿಯಲ್ಲಿ ಭೇಟಿಯಾದರು.

ಈ ಮೊದಲು ಕೇಂದ್ರಗೃಹ ಇಲಾಖೆ ಕಚೇರಿಯಲ್ಲಿ ನಿಗದಿಗಯಾಗಿದ್ದ ಭೇಟಿಯೂ ನಂತರ ಅಮಿತ್‌ ಶಾ ನಿವಾಸದಲ್ಲಿ ಜರುಗಿತು. ಸುಮಾರು 20 ನಿಮಿಷಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದರು.

ಭೇಟಿ ನಂತರ ಟ್ವೀಟ್‌ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದೆ. ಉತ್ತಮ ಮತ್ತು ಫಲಪ್ರದ ಭೇಟಿ ಇದಾಗಿತ್ತು. ದೆಹಲಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಚರ್ಚಿಸಿದ್ದೇವೆ. ದೆಹಲಿಯ ಅಭಿವೃದ್ಧಿಗಾಗಿ ಪರಸ್ಪರರು ಜೊತೆಯಾಗಿ ಕೆಲಸ ಮಾಡಲು ಇಬ್ಬರೂ ಒಪ್ಪಿದ್ದೇವೆ’ ಎಂದು ಅವರು ಟ್ವೀಟ್‌ ಮಾಡಿದರು.

ADVERTISEMENT

ಇದೇ 11ರಂದು ಪ್ರಕಟವಾಗಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯು ಅರವಿಂದ ಕೇಜ್ರಿವಾಲ್‌ ಅವರ ನೇತೃತ್ವದ ಎಎಪಿ ವಿರುದ್ಧ ಹೀನಾಯ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.