ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಸಂಜೆ ವೇಳೆಗೆ ಚಂಡಮಾರುತ ಉಂಟಾಗಲಿದೆ. ಇದು ಗಂಟೆಗೆ 75 ಕಿ.ಮೀ. ವೇಗದಲ್ಲಿ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಚಂಡಮಾರುತಕ್ಕೆ ‘ಅಸನಿ‘ ಎಂದು ಹೆಸರಿಡಲಾಗಿದೆ. ಸಿಂಹಳ ಭಾಷೆಯಲ್ಲಿ ಇದರ ಅರ್ಥ ಕ್ರೋಧ. ಇದು ತೀವ್ರ ಸ್ವರೂಪದಲ್ಲಿರಲಿದ್ದು ಇದು ಋತುಮಾನದ ಮೊದಲ ಚಂಡಮಾರುತವಾಗಿದೆ.
ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಚಂಡಮಾರುತ ಉಂಟಾಗಲಿದೆ. ನಂತರ ಇದು ಮೇ 10ರವರೆಗೆ ಈಶಾನ್ಯ ಭಾಗಕ್ಕೆ ಮುಂದುವರಿದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗಳಿಗೆ ಅಪ್ಪಳಿಸಲಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.