ಮುಜಾಫ್ಫರ್‌ನಗರ (ಉತ್ತರಪ್ರದೇಶ): ಆಶ್ರಮದ ನಾಲ್ಕು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಮಕ್ಕಳನ್ನು ಕಾರ್ಮಿಕರಂತೆ ದುಡಿಸಿದ ಆರೋಪದಡಿ ಆಶ್ರಮದ ಮಾಲೀಕನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಶುಕೆರ್ತಲದಲ್ಲಿರುವ ಆಶ್ರಮದ ಮಾಲೀಕಸ್ವಾಮಿ ಭಕ್ತಿ ಭೂಷಣ್ ಗೋವಿಂದ್ ಮಹಾರಾಜ್‌ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಶ್ರಮದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗಆತನನ್ನುಬಂಧಿಸಲಾಗಿದೆ.
ಮಕ್ಕಳ ಸಹಾಯವಾಣಿ ಮತ್ತು ಪೊಲೀಸರ ತಂಡವು ಆಶ್ರಮದಿಂದ 10 ಬಾಲಕಿಯರನ್ನು ಮಂಗಳವಾರ ರಕ್ಷಿಸಿತ್ತು. ಈ ಮಕ್ಕಳು ತ್ರಿಪುರ, ಮಿಜೋರಾಂ ಮತ್ತು ಅಸ್ಸಾಂ ಮೂಲದವರಾಗಿದ್ದಾರೆ.
‘ಇವರನ್ನು ಮಕ್ಕಳ ಕಲ್ಯಾಣ ಮಂಡಳಿ ಮುಂದೆ ಹಾಜರು ಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿನಾಲ್ವರ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ಧೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.