ADVERTISEMENT

ಕೊರೊನಾ: ಸ್ಮಾರಕಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 16:44 IST
Last Updated 15 ಏಪ್ರಿಲ್ 2021, 16:44 IST

ನವದೆಹಲಿ: ಕೊರೊನಾ ಹರಡುತ್ತಿರುವ ಕಾರಣ ದೇಶದಾದ್ಯಂತ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ವ್ಯಾಪ್ತಿಯ ಸಂರಕ್ಷಿತ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ಮೇ 15ರವರೆಗೆ ನಿರ್ಬಂಧಿಸಲು ಕೇಂದ್ರ ನಿರ್ಧರಿಸಿದೆ.ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಎಎಸ್‌ಐ ನಿರ್ದೇಶಕ (ಸ್ಮಾರಕಗಳು) ಎನ್.ಕೆ. ಪಾಠಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.