ADVERTISEMENT

ಕೋವಿಡ್‌-19: ಮೇ 31ರ ವರೆಗೆ ಸ್ಮಾರಕಗಳಿಗೆ ಪ್ರವೇಶ ನಿಷೇಧ

ಪಿಟಿಐ
Published 12 ಮೇ 2021, 14:26 IST
Last Updated 12 ಮೇ 2021, 14:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವ್ಯಾಪ್ತಿಯ ಸಂರಕ್ಷಿತ ಸ್ಮಾರಕಗಳಿಗೆ ಮೇ 31ರ ವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ಬುಧವಾರ ತಿಳಿಸಿದರು.

ಈ ಮೊದಲು, ಎಎಸ್‌ಐ ವ್ಯಾಪ್ತಿಯ ಸಂರಕ್ಷಿತ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ಮೇ 15ರವರೆಗೆ ನಿರ್ಬಂಧಿಸಲಾಗಿತ್ತು.

ದೇಶದಲ್ಲಿ 3,693 ಸ್ಮಾರಕಗಳು ಹಾಗೂ 50 ವಸ್ತುಸಂಗ್ರಹಾಲಯಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.