ADVERTISEMENT

ಅಸ್ಸಾಂ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಮಹಾಮೈತ್ರಿಗೆ ಹಿನ್ನಡೆ

ಪಿಟಿಐ
Published 6 ಮಾರ್ಚ್ 2021, 20:23 IST
Last Updated 6 ಮಾರ್ಚ್ 2021, 20:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾಮೈತ್ರಿಕೂಟ ಕಟ್ಟುವ ಕಾಂಗ್ರೆಸ್‌ ಯತ್ನಕ್ಕೆ ಹಿನ್ನೆಡೆ ಉಂಟಾಗಿದೆ. ಹೊಸದಾಗಿ ಹುಟ್ಟಿಕೊಂಡಿರುವ ಅಸ್ಸಾಂ ಜಾತೀಯ ಪರಿಷತ್ (ಎಜೆಪಿ) ಮತ್ತು ಅಖಿಲ್ ಗೊಗೊಯಿ ಅವರ ರಾಯ್‌ಜೊರ್ ದಳ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಮಾಜಿ ಕಾರ್ಯದರ್ಶಿ ಲುರಿಂಜ್ಯೋತಿ ಗೊಗೊಯಿ ಅವರು ಎಜೆಪಿ ಕಟ್ಟಿದ್ದು, 18 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಹಾಗೆಯೇ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹುಟ್ಟಿಕೊಂಡ ಅಖಿಲ್ ಗೊಗೊಯಿ ಅವರ ರಾಯ್‌ಜೊರ್ ದಳವು 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೈತ್ರಿಕೂಟದಲ್ಲಿ ಸೇರುವ ಕಾಂಗ್ರೆಸ್ ಆಹ್ವಾನವನ್ನು ಈ ಎರಡೂ ಪಕ್ಷಗಳು ತಿರಸ್ಕರಿಸಿವೆ.

ಜೈಲಿನಿಂದಲೇ ಸ್ಪರ್ಧೆ: ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಅಖಿಲ್ ಗೊಗೊಯಿ ಅವರು ಅಸ್ಸಾಂ ವಿಧಾನಸಭೆಯ ಸಿಬಸಾಗರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯನ್ನು ಸೋಲಿಸುವುದು ತಮ್ಮ ಉದ್ದೇಶದ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಗೊಗೊಯಿ ಅವರನ್ನು 2019ರಲ್ಲಿ ಜೈಲಿಗೆ ಕಳುಹಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.