ADVERTISEMENT

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಮೊದಲ ಮಹಿಳಾ ನಿರ್ದೇಶಕಿ ನೇಮಕ

ಪಿಟಿಐ
Published 27 ಆಗಸ್ಟ್ 2023, 14:27 IST
Last Updated 27 ಆಗಸ್ಟ್ 2023, 14:27 IST
ಡಾ.ಸೊನಾಲಿ ಘೋಷ್‌– ಟ್ವಿಟರ್‌ ಚಿತ್ರ
ಡಾ.ಸೊನಾಲಿ ಘೋಷ್‌– ಟ್ವಿಟರ್‌ ಚಿತ್ರ   @Ecology4UPSC

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ಕ್ಷೇತ್ರ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ. 

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಡಾ.ಸೊನಾಲಿ ಘೋಷ್‌ ಅಸ್ಸಾಂ ಸರ್ಕಾರದಿಂದ ನೇಮಕಗೊಂಡಿರುವ ನಿರ್ದೇಶಕಿ.

ಸೆಪ್ಟೆಂಬರ್‌ 1 ರಿಂದ ಇವರು ಅಧಿಕಾರವಹಿಸಿಕೊಳ್ಳಲಿದ್ದಾರೆ.

ADVERTISEMENT

ಇವರು ನಾಗಾಂವ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್, ಸೋನಿತ್‌ಪುರ ಮತ್ತು ಬಿಸ್ವನಾಥ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಹಾಲಿ ನಿರ್ದೇಶಕರಾಗಿರುವ ಜತೀಂದ್ರ ಶರ್ಮಾ ಅವರು ಆಗಸ್ಟ್‌ 31ರಂದು ನಿವೃತ್ತಿ ಹೊಂದಲಿದ್ದಾರೆ. ಸೆ.1 ರಿಂದ ಸೋನಾಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಅರಣ್ಯಕ್ಕೆ ಮೊದಲ ಮಹಿಳಾ ನಿರ್ದೇಶಕಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವ ಖ್ಯಾತಿ ಸೊನಾಲಿ ಅವರಿಗೆ ಸಲ್ಲುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸೊನಾಲಿ ಅವರು ಇಂಡೋ-ಭೂತಾನ್ ಮಾನಸ್ ಭೂಭಾಗಗಳಲ್ಲಿ ಹುಲಿಗಳಿಗೆ ಆವಾಸಸ್ಥಾನದ ಸೂಕ್ತತೆಗೆ ಸಂಬಂಧಿಸಿದಂತೆ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪದವಿ  ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.