ADVERTISEMENT

ಅಸ್ಸಾಂ | ಸರ್ಕಾರಿ ಉದ್ಯೋಗಿಗಳು ರಾಜಕೀಯ ಪ್ರೇರಿತ ಪೋಸ್ಟ್ ಹಾಕಿದರೆ ಶಿಸ್ತಕ್ರಮ

ಸರ್ಕಾರದ ಸುತ್ತೋಲೆ

ಏಜೆನ್ಸೀಸ್
Published 25 ಡಿಸೆಂಬರ್ 2019, 11:44 IST
Last Updated 25 ಡಿಸೆಂಬರ್ 2019, 11:44 IST
ಸಾಮಾಜಿಕ ಜಾಲತಾಣಗಳು
ಸಾಮಾಜಿಕ ಜಾಲತಾಣಗಳು   

ನವದೆಹಲಿ: ಅಸ್ಸಾಂನಸರ್ಕಾರಿ ಉದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿರಾಜಕೀಯ ಪ್ರೇರಿತ ಪೋಸ್ಟ್‌ ಹಾಕಿದರೆ, ಶಿಸ್ತುಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.

ಅಸ್ಸಾಂಸರ್ಕಾರದ ಕಾರ್ಯದರ್ಶಿ ಹಾಗೂ ಆಯುಕ್ತರ ಸೂಚನೆ ಮೇರೆಗೆ ಅಲ್ಲಿನಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಈ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರ ಟೀಕೆಗೆ ಗುರಿಯಾಗಿದೆ.

ಅಸ್ಸಾಂ ಸೇವೆಗಳನಿಯಮ, 1961ಉಲ್ಲಂಘಿಸಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮತ್ತು ಇತರೆ ವೇದಿಕೆಗಳಲ್ಲಿ ರಾಜಕೀಯ ಪ್ರೇರಿತ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿಅಸ್ಸಾಂನಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಸರ್ಕಾರ ಈ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ನೆಲೆಸಿರುವ ಬಂಗಾಳದಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂಗಳಿಗೆಸಿಎಎಯಿಂದ ಅನುಕೂಲವಾಗುತ್ತದೆ ಎನ್ನುವುದು ಮೂಲ ಅಸ್ಸಾಮಿಗರ ಆಕ್ಷೇಪವಾಗಿದೆ.

ಬಂಗಾಳಿ ಮಾತನಾಡುವ ಹಿಂದೂ ವಲಸಿಗರಿಗೆ ಪೌರತ್ವ ನೀಡಿದರೆ, ಅವರ ಸಂಖ್ಯೆ ರಾಜ್ಯದ ಮೂಲ ನಿವಾಸಿಗರಾದ ಅಸ್ಸಾಮಿ ಮಾತನಾಡುವವರನ್ನು ಮೀರುತ್ತದೆಎನ್ನುವ ಆತಂಕವೂ ಇಲ್ಲಿನ ಜನರಲ್ಲಿದೆ.

ಅನೇಕ ಟ್ವಿಟ್ಟರ್‌ ಬಳಕೆದಾರರು ಈ ಸುತ್ತೋಲೆಯನ್ನು ಶೇರ್ ಮಾಡಿ, ಉದ್ಯೋಗಿಗಳ ಮೇಲೆ ನಿರ್ಬಂಧ ಹೇರುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಸಿಎಎ ಕುರಿತು ತಮ್ಮ ಅಭಿಪ್ರಾಯ ಹೇಳುವವರು ಶಿಕ್ಷೆಗೆ ಗುರಿಯಾಗುತ್ತಾರೆ. ಡಿಸೆಂಬರ್‌ 18ರಂದು ಕಾಯ್ದೆ ವಿರೋಧಿಸಿ ಸುಮಾರು 4 ಲಕ್ಷ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದು ಸರ್ಕಾರಕ್ಕೆ ಆತಂಕವಾಗಿದೆ ಎಂದು ಅನುಪಮ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.