ADVERTISEMENT

ಕುಲಪತಿ ನೇಮಕ | ರಾಜ್ಯಗಳ ಹಕ್ಕುಗಳ ಮೇಲೆ ಪ್ರಹಾರ: ಸಿಪಿಎಂ

ಯುಜಿಸಿ ಕರಡು ನಿಯಮಗಳಿಗೆ ವಿರೋಧ

ಪಿಟಿಐ
Published 8 ಜನವರಿ 2025, 13:42 IST
Last Updated 8 ಜನವರಿ 2025, 13:42 IST
   

ನವದೆಹಲಿ: ಯುಜಿಸಿ ರೂಪಿಸಿರುವ ‘ಕರಡು ನಿಯಮಗಳು–2025’, ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿ ರಾಜ್ಯಗಳು ಹೊಂದಿರುವ ಹಕ್ಕುಗಳ ಮೇಲಿನ ‘ನೇರ ಪ್ರಹಾರ’ದಂತಿವೆ ಎಂದು ಸಿಪಿಎಂ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಪಕ್ಷವು, ‘ಕುಲಪತಿಗಳ ನೇಮಕಕ್ಕೆ ಸಂಬಂಧಿಸಿ ಕರಡು ನಿಯಮಗಳಲ್ಲಿರುವ ಅವಕಾಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದೆ.

‘ಹೊಸ ಮಾರ್ಗಸೂಚಿಗಳು, ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ, ಕುಲಪತಿ ಅಯ್ಕೆ ಮಾಡುವ ಸಮಿತಿಯ ನೇಮಕ ಮಾಡುವ ಅಧಿಕಾರ ನೀಡುತ್ತದೆ. ವಿರೋಧ ಪಕ್ಷಗಳ ಆಡಳಿತವಿರುವ ಕೆಲ ರಾಜ್ಯಗಳಲ್ಲಿ ರಾಜ್ಯಪಾಲರು ತಮಗೆ ತೋಚಿದಂತೆ ಕುಲಪತಿಗಳನ್ನು ನೇಮಕ ಮಾಡುತ್ತಿದ್ದು, ಇದೇ ಕಾರಣಕ್ಕೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ’ ಎಂದು ಸಿಪಿಎಂ ಹೇಳಿದೆ.

ADVERTISEMENT

‘ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದು, ಯುಜಿಸಿ ರೂಪಿಸಿರುವ ಕರಡು ನಿಯಮಗಳು ಸಂವಿಧಾನದಲ್ಲಿ ನೀಡಲಾಗಿರುವ ಈ ಸ್ಥಾನವನ್ನು ಉಲ್ಲಂಘಿಸುತ್ತದೆ’ ಎಂದೂ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.