ADVERTISEMENT

72 ಸಾವಿರ ಬಂದೂಕು ಖರೀದಿ: ಅಮೆರಿಕದೊಂದಿಗೆ ಒಪ್ಪಂದ

ಪಿಟಿಐ
Published 12 ಫೆಬ್ರುವರಿ 2019, 20:30 IST
Last Updated 12 ಫೆಬ್ರುವರಿ 2019, 20:30 IST
ಅಸಾಲ್ಟ್‌ ರೈಫಲ್‌
ಅಸಾಲ್ಟ್‌ ರೈಫಲ್‌   

ನವದೆಹಲಿ: ಸೇನೆಗಾಗಿ 72,400 ಬಂದೂಕುಗಳ (ಅಸಾಲ್ಟ್‌ ರೈಫಲ್ಸ್‌) ಖರೀದಿಗಾಗಿ ಕೇಂದ್ರ ಸರ್ಕಾರ, ಅಮೆರಿಕದ‘ಸಿಗ್‌ ಸಾವರ್’ ಕಂಪನಿಯೊಂದಿಗೆ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.

‘ತ್ವರಿತ ಗತಿ ಖರೀದಿ ಪ್ರಕ್ರಿಯೆ’ ಯಡಿ ₹ 700 ಕೋಟಿ ವೆಚ್ಚದಲ್ಲಿ ಈ ಬಂದೂಕುಗಳನ್ನು ಖರೀದಿ ಮಾಡಲಾಗುತ್ತಿದೆ. ಒಂದು ವರ್ಷದ ಒಳಗಾಗಿ ಕಂಪನಿ ಈ ಬಂದೂಕುಗಳನ್ನು ಪೂರೈಕೆ ಮಾಡಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವತಃ ಅಮೆರಿಕ ಅಲ್ಲದೇ, ಯುರೋಪ್‌ನ ಅನೇಕ ರಾಷ್ಟ್ರಗಳ ಭದ್ರತಾ ಪಡೆಗಳು ಈ ಬಂದೂಕುಗಳನ್ನು ಬಳಕೆ ಮಾಡುತ್ತಿವೆ.

ADVERTISEMENT

ಸದ್ಯ, ಸೇನಾಪಡೆಗಳು ಐಎನ್‌ಎಸ್‌ಎಎಸ್‌ ಬಂದೂಕುಗಳನ್ನು ಬಳಸುತ್ತಿವೆ. ಈಗಿನ ಅಗತ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗಡಿಭಾಗದಲ್ಲಿನ ಪರಿಸ್ಥಿತಿಯಲ್ಲಿ ಸುಲಭ ಬಳಕೆ ಹಾಗೂ ನಿರ್ವಹಣೆ ಸಾಧ್ಯವಿರುವ ‘ಸಿಗ್‌ ಸಾವರ್’ ಕಂಪನಿ ತಯಾರಿಸುವ ಬಂದೂಕುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.