ADVERTISEMENT

ದೆಹಲಿ: ಕನಿಷ್ಠ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್ ದಾಖಲು

ಪಿಟಿಐ
Published 4 ನವೆಂಬರ್ 2020, 7:02 IST
Last Updated 4 ನವೆಂಬರ್ 2020, 7:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬುಧವಾರ ಬೆಳಿಗ್ಗಿನ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಚಳಿಯ ವಾತಾವರಣ ಮುಂದುವರಿದಿದೆ.

ಭಾರತೀಯ ಹವಾಮಾನ ಇಲಾಖೆಯು, ಶೀತಗಾಳಿ ಘೋಷಣೆ ಮಾನದಂಡಕ್ಕೆ ಅನುಗುಣವಾಗಿ ಮಂಗಳವಾರ ತಾಪಮಾನ ದಾಖಲಾಗಿತ್ತು. ಬುಧವಾರ ಅಂಥ ಸ್ಥಿತಿ ಇಲ್ಲ ಎಂದು ತಿಳಿಸಿದೆ.

ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಿ ಸತತ ಎರಡು ದಿನ ದಾಖಲಾದಲ್ಲಿ ಶೀತಗಾಳಿ ಸ್ಥಿತಿ ಇದೆ ಎಂದು ಘೋಷಿಸಲಾಗುತ್ತದೆ.

ADVERTISEMENT

ತಾಪಮಾನವು ಮಂಗಳವಾರ 10ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ದಾಖಲಾಗಿತ್ತು. ಇದು, ಡಾಲ್‌ಹೌಸಿ (10.9 ಡಿಗ್ರಿ ಸೆಲ್ಸಿಯಸ್), ಧರ್ಮಶಾಲಾ (10.6), ಹಿಮಾಚಲ ಪ್ರದೇಶದ ಮಂಡಿ (10.2) ಮತ್ತು ಉತ್ತರಾಖಂಡದ ಮುಸ್ಸೋರಿಯಲ್ಲಿ (10.4) ದಾಖಲಾಗಿದ್ದಕ್ಕಿಂತಲೂ ಕಡಿಮೆ ಇತ್ತು.

ಚಳಿಯ ವಾತಾವರಣ ಮುಂದಿನ ನಾಲ್ಕು, ಐದು ದಿನಗಳು ಹೀಗೇ ಮುಂದುವರಿಯಲಿವೆ ಎಂದು ಐಎಂಡಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.