ADVERTISEMENT

ದೆಹಲಿ | ಡಿಸೆಂಬರ್‌ನಲ್ಲಿ 101 ವರ್ಷದಲ್ಲೇ ದಾಖಲೆ ಮಳೆ

ಪಿಟಿಐ
Published 28 ಡಿಸೆಂಬರ್ 2024, 14:28 IST
Last Updated 28 ಡಿಸೆಂಬರ್ 2024, 14:28 IST
<div class="paragraphs"><p>ನವದೆಹಲಿಯ ವಿಜಯಚೌಕ್‌ನಲ್ಲಿ ಶನಿವಾರ ಮಳೆ ಸುರಿದ ನಡುವೆಯೂ ಛತ್ರಿ ಹಿಡಿದು ಸಾಗಿದ ಮಹಿಳೆ</p></div>

ನವದೆಹಲಿಯ ವಿಜಯಚೌಕ್‌ನಲ್ಲಿ ಶನಿವಾರ ಮಳೆ ಸುರಿದ ನಡುವೆಯೂ ಛತ್ರಿ ಹಿಡಿದು ಸಾಗಿದ ಮಹಿಳೆ

   

ಪಿಟಿಐ ಚಿತ್ರ

ನವದೆಹಲಿ: ಶನಿವಾರ ಬೆಳಿಗ್ಗೆ 8.30ಕ್ಕೆ ಮುಕ್ತಾಯಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 4.1 ಸೆ.ಮೀ ಮಳೆಯಾಗಿದೆ. ಇದು ಕಳೆದ 101 ವರ್ಷಗಳಲ್ಲಿಯೇ ಡಿಸೆಂಬರ್‌ ತಿಂಗಳಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ADVERTISEMENT

1923ರ ಡಿ.3ರಂದು ದೆಹಲಿಯಲ್ಲಿ ಒಂದೇ ದಿನ 7.57 ಸೆ.ಮೀ ದಾಖಲೆಯ ಮಳೆಯಾಗಿತ್ತು ಎಂದು ಐಎಂಡಿ ತಿಳಿಸಿದೆ.  

‘ಸಫ್ದರ್‌ಜಂಗ್‌ನಲ್ಲಿ ಶನಿವಾರ ಬೆಳಿಗ್ಗೆವರೆಗೂ ಸುರಿದ ಮಳೆಯ ಒಟ್ಟು ಪ್ರಮಾಣವು 1901ರ ಬಳಿಕ ಎರಡನೇ ಗರಿಷ್ಠ ಪ್ರಮಾಣವಾಗಿದೆ. ಮಾಸಿಕ ಮಳೆಯ ಲೆಕ್ಕಾಚಾರದ ಪ್ರಕಾರ, ಐದನೇ ಗರಿಷ್ಠದ್ದಾಗಿದೆ’ ಎಂದು ಐಎಂಡಿಯ ಅಧಿಕಾರಿಯೊಬ್ಬರು ತಿಳಿಸಿದರು. 

ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಮೋ‌ಡ ಕವಿದ ವಾತಾವರಣವಿತ್ತು. ಆದರೂ, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಯಲ್ಲೋ ಅಲರ್ಟ್‌ ಸೂಚನೆ ನೀಡಿತ್ತು. 

ದೆಹಲಿಯಲ್ಲಿ ಶನಿವಾರ ಕನಿಷ್ಠ ತಾಪಮಾನ 12.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 

ಮಳೆಯಿಂದ ದೆಹಲಿಯ ಗಾಳಿಯ ಮಟ್ಟ ‘ಮಧ್ಯಮ’ ಮಟ್ಟಕ್ಕೆ ತಲುಪಿದ್ದರೂ, ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 152ರಷ್ಟಿತ್ತು ಎಂದು ಕೇಂದ್ರಿಯ ಮಾಲಿನ್ಯ ಮಂಡಳಿ ಅಂಕಿಅಂಶಗಳಿಂದ ತಿಳಿದು ಬಂದಿದೆ.

ನವದೆಹಲಿಯಲ್ಲಿ ಶನಿವಾರ ನಿರಂತರ ಮಳೆ ಸುರಿದಿದ್ದರಿಂದ ಆರ್‌.ಕೆ.ಪುರಂನಲ್ಲಿ ರಸ್ತೆಯ ಭಾಗವೊಂದು ಕುಸಿದುಬಿತ್ತು–ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.