ADVERTISEMENT

ಅಯೋಧ್ಯೆ ತೀರ್ಪಿನಲ್ಲಿ ದೋಷ, ಮುಸ್ಲಿಮರು ತೀರ್ಪು ಒಪ್ಪಿಕೊಳ್ಳಬೇಕು: ಯಶವಂತ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 7:15 IST
Last Updated 18 ನವೆಂಬರ್ 2019, 7:15 IST
ಯಶವಂತ ಸಿನ್ಹಾ
ಯಶವಂತ ಸಿನ್ಹಾ   

ಮುಂಬೈ:ಸುಪ್ರೀಂ ಕೋರ್ಟ್‌ ನೀಡಿರುವ ಅಯೋಧ್ಯೆ ತೀರ್ಪು ದೋಷದಿಂದ ಕೂಡಿದೆ, ಆದಾಗ್ಯೂಮುಸ್ಲಿಂ ಸಮುದಾಯದವರು ಈ ತೀರ್ಪನ್ನುಒಪ್ಪಿಕೊಳ್ಳಬೇಕು ಎಂದುಬಿಜೆಪಿಮಾಜಿ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ಕುರಿತು ನಿಮ್ಮ ಅಭಿಪ್ರಾಯವೇನು ಎನ್ನುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಸುಪ್ರೀಂ ಕೋರ್ಟ್ ತೀರ್ಪು ನ್ಯೂನತೆಯಿಂದಕೂಡಿದೆ. ಈ ವಿಚಾರವನ್ನುಬದಿಗೊತ್ತಿ,ತೀರ್ಪನ್ನು ಒಪ್ಪಿಕೊಳ್ಳುವಂತೆ ಮುಸ್ಲಿಂ ಸಮುದಾಯಕ್ಕೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಮೇಲೆ ಬೇರೆ ತೀರ್ಪು ಇರುವುದಿಲ್ಲ. ತೀರ್ಪನ್ನು ಒಪ್ಪಿಕೊಂಡು ಮುಂದೆ ಸಾಗಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಅಡ್ವಾನಿ‌ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರು ರಾಮ ಮಂದಿರ ನಿರ್ಮಾಣದ ಸಾಧನೆಯನ್ನು ತಮ್ಮದು ಎನ್ನುವ ಮೊದಲೇ ಬಾಬರಿ ಮಸೀದಿ ದ್ವಂಸದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು ಮತ್ತು ತಮ್ಮನ್ನು ಇದರಲ್ಲಿ ಆರೋಪಿಗಳನ್ನಾಗಿಸಿರುವುದಕ್ಕೆ ಪರಿತಪಿಸಿದ್ದರು ಎಂದು ಸಿನ್ಹಾ ಹೇಳಿದ್ದಾರೆ.

1993ರಲ್ಲಿಪ್ರಜ್ಞಾಪೂರ್ವಕವಾಗಿ ಬಿಜೆಪಿ (ಕೋಮುವಾದಿ ಶಕ್ತಿ)ಸೇರುವನಿರ್ಧಾರ ತೆಗೆದುಕೊಂಡಿದ್ದೆ. ಏಕೆಂದರೆ ಇದು "ಭ್ರಷ್ಟ ಶಕ್ತಿ(ಕಾಂಗ್ರೆಸ್)ಗಿಂತ ಉತ್ತಮ ಪರ್ಯಾಯವೆಂದು ಭಾವಿಸಿದ್ದೆಎಂದು ಸಿನ್ಹಾ ಹೇಳಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ತೀರ್ಪಿನಲ್ಲಿ ಹೇಳಲಾಗಿರುವ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಪರ್ಯಾಯ ಭೂಮಿಯನ್ನು ನಿರಾಕರಿಸಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.