ADVERTISEMENT

‘2024ರ ಮಾರ್ಚ್‌ಗೆ ಅಂಬೇಡ್ಕರ್‌ ಸ್ಮಾರಕ ಪೂರ್ಣ:

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 11:26 IST
Last Updated 15 ಏಪ್ರಿಲ್ 2022, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತ ರತ್ನ,ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭವ್ಯ ಸ್ಮಾರಕವು ಮಾರ್ಚ್‌ 2024ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ತಿಳಿಸಿದೆ.

ಮಾಹಿತಿ ಹಕ್ಕು ಕಾಯ್ದೆಯ ಕಾರ್ಯಕರ್ತ ಅನಿಲ್‌ ಗಲಗಲಿ ಎಂಬುವವರು ಅಂಬೇಡ್ಕರ್‌ ಸ್ಮಾರಕದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಎಂಎಂಆರ್‌ಡಿಎಗೆ ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು.

ಈ ಪ್ರಶ್ನೆಗಳಿಗೆ ಉತ್ತರ ನೀಡಿರುವಎಂಎಂಆರ್‌ಡಿಎ, ಅಂಬೇಡ್ಕರ್‌ ಸ್ಮಾರಕ ಯೋಜನೆ ಕುರಿತಂತೆ 2021ರ 23 ನವೆಂಬರ್‌ವರೆಗೆ ಒಟ್ಟು ₹ 209.53 ಕೋಟಿಗಳನ್ನು ಪಾವತಿಸಲಾಗಿದೆ. ಯೋಜನೆಯ ಚಾಲನೆಗೆ ₹ 31.65 ಕೋಟಿ ಹಾಗೂ ಯೋಜನಾ ಸಲಹೆಯ ಶುಲ್ಕ ₹ 12.86 ಕೋಟಿ ಸೇರಿದೆ. ಈಗಾಗಲೇ ಶೇಕಡ 49ರಷ್ಟು ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಶೇಕಡ 6ರಷ್ಟು ಪಾದಚಾರಿ ಮಾರ್ಗದ ಕಾಮಗಾರಿ ಪೂರ್ಣವಾಗಿದೆ ಎಂದು ತಿಳಿಸಿದೆ.

ADVERTISEMENT

ಅಂಬೇಡ್ಕರ್‌ ಅವರ ಸ್ಮಾರಕವನ್ನು ದಾದರ್‌ನ ಇಂದು ಮಿಲ್ಸ್‌ ಆವರಣದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಅಂಬೇಡ್ಕರ್‌ ಅವರ ಅತೀ ಎತ್ತರದ ಪ್ರತಿಮೆ ಆಗಲಿದೆ. ಸ್ಮಾರಕದ ಯೋಜನೆಯನ್ನು ಶಪೂರ್ಜಿ ಪಲ್ಲೊಂಜಿ ಅಂಡ್‌ ಕಂಪನಿ ಪ್ರೈ.ಲಿ ಗುತ್ತಿಗೆ ಪಡೆದಿದ್ದು, ಶಶಿ ಪ್ರಭು ಅಸೋಸಿಯೇಟ್ಸ್‌ ಮತ್ತು ಡಿಸೈನ್‌ ಅಸೋಸಿಯೇಟ್ಸ್‌ ಕಂಪನಿಯು ಯೋಜನೆಯ ಸಲಹೆಗಾರ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಲಗಲಿ, ‘ಈಗಾಗಲೇ ಕಟ್ಟಡದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಯೋಜನೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮಾರ್ಚ್‌ 2024ರವರೆಗೆ ಸಮಯ ನೀಡಲಾಗಿದೆ. ಯೋಜನೆಗೆ ಒಟ್ಟು 36 ತಿಂಗಳ ಕಾಲಾವಕಾಶ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.