ಚಿತ್ರಕೃಪೆ: ಎಕ್ಸ್
ಚಂಡೀಗಢ: ಬಬ್ಬರ್ ಖಾಲ್ಸಾದ ಅಂತರರಾಷ್ಟ್ರೀಯ ಭಯೋತ್ಪಾದಕ ಪರ್ಮಿಂದರ್ ಸಿಂಗ್ ಅಲಿಯಾಸ್ ಪಿಂಡಿ ಅನ್ನು ಯುಎಇಯಿಂದ ಗಡಿಪಾರು ಮಾಡಲಾಗಿದ್ದು, ಭಾರತಕ್ಕೆ ಕರೆತರಲಾಗಿದೆ ಎಂದು ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ಶನಿವಾರ ತಿಳಿಸಿದರು.
ಈತ ಗುರುದಾಸ್‌ಪುರದ ಬಟಾಲಾದಲ್ಲಿ ಪೆಟ್ರೊಲ್ ಬಾಂಬ್ ದಾಳಿಗಳು, ಹಿಂಸಾತ್ಮಕ ಹಲ್ಲೆಗಳು, ಸುಲಿಗೆ ಸೇರಿದಂತೆ ಅನೇಕ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಯಾದವ್ ಹೇಳಿದರು.
ವಿದೇಶ ಮೂಲದ ಭಯೋತ್ಪಾದಕರಾದ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಮತ್ತು ಹ್ಯಾಪಿ ಪಾಸಿಯಾಗೆ ಪಿಂಡಿ ಆಪ್ತ. ಸಿಬಿಐ ಸೇರಿದಂತೆ ಕೇಂದ್ರ ಸಂಸ್ಥೆಗಳ ನಿಕಟ ಸಮನ್ವಯದೊಂದಿಗೆ ಆತನನ್ನು ಯುಎಇಯ ಅಬುಧಾಬಿಯಿಂದ ಕರೆತರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.