ADVERTISEMENT

ಕೇಜ್ರಿವಾಲ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರ್ತಾನೆ ಮಫ್ಲರ್ ಪುಟಾಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2020, 8:51 IST
Last Updated 13 ಫೆಬ್ರುವರಿ 2020, 8:51 IST
ಮತ ಎಣಿಕೆ ದಿನ ಕೇಜ್ರಿವಾಲ್ ವೇಷದಲ್ಲಿ ಕಂಗೊಳಿಸಿದ ಮಗು ಅಯ್ಯನ್ ತೊಮಾರ್‌
ಮತ ಎಣಿಕೆ ದಿನ ಕೇಜ್ರಿವಾಲ್ ವೇಷದಲ್ಲಿ ಕಂಗೊಳಿಸಿದ ಮಗು ಅಯ್ಯನ್ ತೊಮಾರ್‌   

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿಯಾಗಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಮುದ್ದು ಮಫ್ಲರ್ ಪುಟಾಣಿಯನ್ನೂ ಆಹ್ವಾನಿಸಲಾಗಿದೆ.

ಮುಂದಿನ ಭಾನುವಾರ (ಫೆ.16) ರಾಮ್‌ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದ ಮಂಗಳವಾರಅರವಿಂದ್ ಕೇಜ್ರಿವಾಲ್‌ರ ಮನೆ ಮತ್ತು ಆಪ್ ಕಚೇರಿ ಸಮೀಪದಒಂದು ವರ್ಷ ವಯಸ್ಸಿನ ಅಯ್ಯನ್ ತೊಮಾರ್‌ ಕೇಜ್ರಿವಾಲ್‌ರಂತೆ ಕನ್ನಡಕ, ಮಫ್ಲರ್‌ ಮತ್ತು ಟೋಪಿ ತೊಟ್ಟು ಕಾಣಿಸಿಕೊಂಡಿದ್ದ.

ADVERTISEMENT

ಅಯ್ಯನ್ ಪುಟಾಣಿಯನ್ನು ಕೇಜ್ರಿವಾಲ್‌ ಭೇಟಿಯಾಗುತ್ತಾರೆ ಕುಟುಂಬದ ಸದಸ್ಯರು ಹೇಳಿದ್ದರಾದರೂ ಮತ ಎಣಿಕೆಯ ದಿನ ಅದು ಸಾಧ್ಯವಾಗಲಿಲ್ಲ. ಅಯ್ಯನ್ ಕುಟುಂಬವು ಕೇಜ್ರಿವಾಲ್‌ಗಾಗಿ ಕಾದು ಆಪ್ ಕಚೇರಿಯಿಂದ ಹೊರಟಿತ್ತು.

ಇದೀಗ ಆಪ್‌ ಪಕ್ಷವು ಮಫ್ಲರ್ ಪುಟಾಣಿಯನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದೆ. ‘ಸೂಟ್‌ ಅಪ್ ಜೂನಿಯರ್’ ಎಂದು ಆಪ್ ಟ್ವೀಟ್ ಮಾಡಿದೆ.

ಮುಂದಿನ ಭಾನುವಾರ (ಫೆ.16) ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಮ್‌ ಲೀಲಾ ಮೈದಾನದಲ್ಲಿ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.