ADVERTISEMENT

ಬದಾಯುಂ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಪೊಲೀಸರ ಕಸ್ಟಡಿಗೆ

ಪಿಟಿಐ
Published 13 ಜನವರಿ 2021, 6:37 IST
Last Updated 13 ಜನವರಿ 2021, 6:37 IST
ಬದಾಂಯು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಸತ್ಯನಾರಯಣನ್‌ ಕರೆದೊಯ್ಯುತ್ತಿರುವ ಪೊಲೀಸರು
ಬದಾಂಯು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಸತ್ಯನಾರಯಣನ್‌ ಕರೆದೊಯ್ಯುತ್ತಿರುವ ಪೊಲೀಸರು   

ಬದಾಯುಂ: ಉತ್ತರ ಪ್ರದೇಶದ ಬದಾಯುಂನಲ್ಲಿ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿರುವ ಆರೋಪ ಎದುರಿಸುತ್ತಿರುವ ಪುರೋಹಿತ ಮತ್ತು ಆತನ ಸಹಚರರನ್ನು ಸ್ಥಳೀಯ ನ್ಯಾಯಾಲಯವು ಒಂದು ದಿನದ ಮಟ್ಟಿಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.

‘ಈ ಪ್ರಕರಣದ ಮೂರು ಆರೋಪಿಗಳು ಜೈಲಿನಲ್ಲಿ ಇದ್ದಾರೆ. ಆದರೆ ಪ್ರಕರಣ ಸಂಬಂಧಿಸಿದ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದೇವೆ’ ಎಂದು ಬಿಲ್ಸಿಯ ಸರ್ಕಲ್‌ ಅಧಿಕಾರಿ ಅನಿರುದ್ಧ್‌ ಸಿಂಗ್‌ ಅವರು ಬುಧವಾರ ತಿಳಿಸಿದರು.

‘ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ನ್ಯಾಯಾಲಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಮನವಿ ಮಾಡಲಾಗಿತ್ತು. ಇದಕ್ಕಾಗಿ ಅನುಮತಿಯೂ ದೊರಕಿದೆ’ ಎಂದು ಅವರು ಹೇಳಿದರು.

ADVERTISEMENT

ಉತ್ತರ ಪ್ರದೇಶದ ಬದಾಯುಂ ಜಿಲ್ಲೆಯಲ್ಲಿ 50 ವರ್ಷದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.