ADVERTISEMENT

ಗೋವನ್ನು ಪ್ರಾಣಿಗಳ ಪಟ್ಟಿಯಿಂದ ತೆಗೆದು, ರಾಷ್ಟ್ರ ಮಾತೆಯಾಗಿ ಘೋಷಿಸಿ: ಸ್ವಾಮೀಜಿ

ಪಿಟಿಐ
Published 12 ಫೆಬ್ರುವರಿ 2025, 2:15 IST
Last Updated 12 ಫೆಬ್ರುವರಿ 2025, 2:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಹಾಕುಂಭ ನಗರ: ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಗೋಹತ್ಯೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿದ್ದಾರೆ.

ಇಲ್ಲಿನ ಸೆಕ್ಟರ್‌ 19ರಲ್ಲಿರುವ ಶಂಕರಾಚಾರ್ಯ ಶಿಬಿರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿರುವ ಅವರು, 'ಗೋವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲಸಿದ್ದಾರೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಗೋವನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಬೇಕೆಂದು ಒಂದೂವರೆ ವರ್ಷದಿಂದ ಆಂದೋಲನ ನಡೆಸುತ್ತಿದ್ದೇವೆ. ಇದೀಗ ನಾವು ಮಾಘಿ ಪೂರ್ಣಿಮೆಯ ಮರುದಿನದಿಂದ (ಗುರುವಾರದಿಂದ) 33 ದಿನಗಳ ಯಾತ್ರೆ ಆರಂಭಿಸಲು ನಿರ್ಧರಿಸಿದ್ದೇವೆ' ಎಂದು ಹೇಳಿದ್ದಾರೆ.

ADVERTISEMENT

'ಈ ಯಾತ್ರೆಯು ಮಾರ್ಚ್‌ 17ರಂದು ದೆಹಲಿ ತಲುಪುವ ಮೂಲಕ ಕೊನೆಗೊಳ್ಳಲಿದೆ' ಎಂದಿರುವ ಅವರು, 'ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ 33 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಈ ಅವಧಿಯಲ್ಲಿ ತೀರ್ಮಾನ ಮಾಡದಿದ್ದರೆ, ಮಾರ್ಚ್‌ 17ರ ಸಂಜೆ 5ರ ನಂತರ ನಾವು ಕಠಿಣ ನಿರ್ಧಾರ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.

'ಗೋವನ್ನು ಪ್ರಾಣಿಗಳ ಪಟ್ಟಿಯಿಂದ ತೆಗೆದುಹಾಕಿ ರಾಷ್ಟ್ರ ಮಾತೆ ಎಂದು ಘೋಷಿಸಬೇಕು ಹಾಗೂ ಗೋಹತ್ಯೆಯನ್ನು ಅಪರಾಧವೆಂದು ಪರಿಗಣಿಸಬೇಕು ಎಂಬುದು ಕೇಂದ್ರ ಸರ್ಕಾರದ ಮುಂದೆ ನಾವು ಇಡುತ್ತಿರುವ ಬೇಡಿಕೆಯಾಗಿದೆ. ರಾಜ್ಯ ಸರ್ಕಾರವು ಗೋವನ್ನು ಶಾಲಾ ಪಠ್ಯಕ್ರಮದಲ್ಲಿ  ಸೇರಿಸಲು ಮುಂದಾಗಿದೆ. ಆದರೆ, ಅದರಲ್ಲಿಯೂ ಗೋವನ್ನು ಪ್ರಾಣಿ ಎಂದೇ ಕರೆಯುವುದಾದರೆ ಅದರ ಪ್ರಯೋಜನವೇನು?' ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.